ಟ್ರಕ್ ಚಾಲಕರು,ಕಾರ್ಮಿಕರು ಕೆಲಸದ ಸ್ಥಳ ತಲುಪುವುದನ್ನು ಖಚಿತಪಡಿಸಿಕೊಳ್ಳಿ: ರಾಜ್ಯಗಳಿಗೆ ಕೇಂದ್ರ ಸೂಚನೆ

Update: 2020-04-06 08:02 GMT

ಹೊಸದಿಲ್ಲಿ, ಎ.6: ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ಆಹಾರ ಹಾಗೂ ದಿನಸಿ ವಸ್ತುಗಳ ರಾಜ್ಯ ಹಾಗೂ ಅಂತರ್‌ರಾಜ್ಯ ಸಾಗಾಟವನ್ನು ಖಚಿತಪಡಿಸಿಕೊಳ್ಳಲು ಈ ವಲಯಕ್ಕೆ ಸಂಬಂಧಿಸಿದ ಟ್ರಕ್ ಚಾಲಕರು ಹಾಗೂ ಕಾರ್ಮಿಕರು ತಮ್ಮ ಕೆಲಸದ ಸ್ಥಳವನ್ನು ತಲುಪಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಿ, ಚಾಲಕರು, ಕಾರ್ಮಿಕರು ಕೆಲಸದ ಸ್ಥಳ ತಲುಪುವುದನ್ನು ಖಚಿತಪಡಿಸಿಕೊಳ್ಳಿ ಎಂದು ಕೇಂದ್ರ ಸರಕಾರವು ಎಲ್ಲ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ.

ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಪವನ್ ಕುಮಾರ್ ಅಗರ್ವಾಲ್ ಎಲ್ಲ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡುವಂತೆ ಎಲ್ಲ ರಾಜ್ಯ ಸರಕಾರವನ್ನು ಕೇಳಿಕೊಂಡಿದ್ದು, ನೋಡಲ್ ಅಧಿಕಾರಿ ಸರಬರಾಜಿಗೆ ತೊಂದರೆ ಇಲ್ಲದ ಸಂಚಾರವನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಪೊಲೀಸರೊಂದಿಗೆ ಸಮನ್ವಯ ಸಾಧಿಸಲಿದ್ದಾರೆ. ಗೊತ್ತುಪಡಿಸಿದ ಅಧಿಕಾರಿ ದೇಶವ್ಯಾಪಿ ಅಗತ್ಯವಸ್ತುಗಳನ್ನು ಪೂರೈಸುವ ಕಂಪೆನಿಗಳು ಹಾಗೂ ಸಂಸ್ಥೆಗಳಿಗೆ ಅಧಿಕೃತ ಪತ್ರಗಳನ್ನು ನೀಡಲಿದ್ದಾರೆ ಎಂದು ಅವರು ಹೇಳಿದರು.

ಲಾಕ್‌ಡೌನ್ ಸಮಯದಲ್ಲಿ ಟ್ರಕ್ ಚಾಲಕರು ಪೊಲೀಸರಿಂದ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಒಬ್ಬ ಚಾಲಕ, ಒಬ್ಬ ಹೆಚ್ಚುವರಿ ವ್ಯಕ್ತಿಯನ್ನು ಅವರ ವಾಸಸ್ಥಳದಿಂದ ಟ್ರಕ್‌ಗೆ ಸ್ಥಳಾಂತರಿಸುವುದರಿಂದ ಸ್ಥಳೀಯ ಅಧಿಕಾರಿಗಳು ವಿನಮ್ರವಾಗಿ ವರ್ತಿಸಬೇಕು ಎಂದು ಕಾರ್ಯದರ್ಶಿ ಅಗರ್ವಾಲ್ ಹೇಳಿದರು.

  ತಮ್ಮ ಕೆಲಸಗಳಿಗೆ ಕಾರ್ಮಿಕರನ್ನು ಪಡೆಯುವುದೇ ಕಷ್ಟದ ಕೆಲಸ ಎಂದು ಹಲವು ಕಂಪೆನಿಗಳು ಹೇಳಿವೆ. ಕಾರ್ಖಾನೆಗಳು, ಗೋದಾಮುಗಳು ಹಾಗೂ ಅಗತ್ಯ ಆಹಾರ ಹಾಗೂ ದಿನಸಿ ಸಾಮಗ್ರಿಗಳ ಸಾರಿಗೆ ಮತ್ತು ವಿತರಣೆ ಕಾರ್ಯಾಚರಣೆಗಳಲ್ಲಿ ಕಾರ್ಮಿಕರ ಲಭ್ಯತೆಯನ್ನು ಖಚಿಪಡಿಸಿಕೊಳ್ಳಲು ಅನುಕೂಲವಾಗುವಂತೆ ಸ್ಥಳೀಯ ಆಡಳಿತಕ್ಕೆೆ ಸಲಹೆ ನೀಡಬಹುದು. ಕೆಲಸಕ್ಕೆ ಹೋಗುವಂತೆ ಕಾರ್ಮಿಕರಿಗೆ ಅವಕಾಶ ನೀಡುವಂತೆ ಮನೆಯ ಮಾಲಕರು, ಸೊಸೈಟಿ ಹಾಗೂ ಹಳ್ಳಿಗಳಲ್ಲಿ ಮನವಿ ಮಾಡಬಹುದು ಎಂದು ಕಾರ್ಯದರ್ಶಿ ಅಗರ್ವಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News