ಆಸ್ಪತ್ರೆಯ 6ನೆ ಮಹಡಿಯಿಂದ ಬೆಡ್ ಶೀಟ್ ಬಳಸಿ ಇಳಿಯಲು ಯತ್ನಿಸಿದ ಕೊರೋನ ಶಂಕಿತ ಮೃತ್ಯು

Update: 2020-04-06 08:37 GMT

ಕರ್ನಾಲ್(ಪಂಜಾಬ್), ಎ.6: ಕೊರೋನ ವೈರಸ್ ತಗಲಿರುವ ಶಂಕೆಯ ಮೇರೆಗೆ ಇಲ್ಲಿನ ಆಸ್ಪತ್ರೆಯ ಆರನೇ ಮಹಡಿಯಲ್ಲಿರುವ ಐಸೊಲೇಶನ್ ವಾರ್ಡ್ ನಲ್ಲಿದ್ದ 55 ವರ್ಷದ ವ್ಯಕ್ತಿ ಪರಾರಿಯಾಗಲು ಯತ್ನಿಸಿ ಮೃತಪಟ್ಟಿರುವ ಘಟನೆ ಸೋಮವಾರ ಸಂಭವಿಸಿದೆ.

ಇಲ್ಲಿಂದ 4 ಕಿ.ಮೀ. ದೂರದಲ್ಲಿರುವ ಕರ್ನಾಲ್‌ನ ಕಲ್ಪನಾ ಚಾವ್ಲಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕಿಟಕಿಯ ಮೂಲಕ ಕೆಳಗೆ ಬಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಬೆಡ್‌ಶೀಟನ್ನು ಹಗ್ಗವಾಗಿ ಬಳಸಿಕೊಂಡು ಗೋಡೆಯ ಮೂಲಕ ಇಳಿಯಲು ಯತ್ನಿಸಿದ ವೇಳೆ ವ್ಯಕ್ತಿ ಕೆಳಗೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 ಪಾಣಿಪತ್‌ನ ವ್ಯಕ್ತಿ ಎಪ್ರಿಲ್ 1ರಂದು ಆಸ್ಪತ್ರೆಗೆ ದಾಖಲಾಗಿದ್ದು, ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದರು. ಹಲವು ಕಾಯಿಲೆಗಳನ್ನು ಹೊಂದಿದ್ದ ವ್ಯಕ್ತಿಯಲ್ಲಿ ಕೋವಿಡ್-19 ಲಕ್ಷಣ ಕಾಣಿಸದಿದ್ದರೂ ಐಸೋಲೇಶನ್‌ನಲ್ಲಿ ಇಡಲಾಗಿತ್ತು. ವ್ಯಕ್ತಿಯ ರಕ್ತ ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ.

ಈ ಘಟನೆಯು ಐಸೋಲೇಶನ್ ವಾರ್ಡ್‌ನಲ್ಲಿನ ಭದ್ರತೆಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ನಿನ್ನೆ ದಿಲ್ಲಿಯ ಏಮ್ಸ್ಸ್ ಆಸ್ಪತ್ರೆಯ ಅಪಘಾತದ ಕೇಂದ್ರದಿಂದ ಜಿಗಿದ ವ್ಯಕ್ತಿ ಜೀವಾಪಾಯದಿಂದ ಪಾರಾಗಿದ್ದು, ಕಾಲು ಬಿರುಕುಬಿಟ್ಟಿರುವ ಘಟನೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News