×
Ad

'ಅಂಕಲ್ ಶಾಂತರಾಗಿ': ಫೋಟೊಶಾಪ್ ಚಿತ್ರ ಶೇರ್ ಮಾಡಿದ ಅಮಿತಾಬ್ ಬಚ್ಚನ್ ಕಾಲೆಳೆದ ಟ್ವಿಟರಿಗರು

Update: 2020-04-06 22:54 IST

ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಿನ ಪ್ರದರ್ಶನಕ್ಕೆ ಪ್ರಧಾನಿ ಮೋದಿ ನೀಡಿದ್ದ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ನಡುವೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತೊಮ್ಮೆ ನಕಲಿ ಫೋಟೊ ಟ್ವೀಟ್ ಮಾಡುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ.

ರವಿವಾರ 9 ಗಂಟೆಗೆ ಮನೆಯಲ್ಲಿ ಟಾರ್ಚ್ ಬೆಳಗಿದ್ದ ಅಮಿತಾಬ್ ಬಚ್ಚನ್ ಆ ಫೋಟೊವನ್ನು ಟ್ವೀಟ್ ಮಾಡಿದ್ದರು. ಇನ್ನೊಂದು ಟ್ವೀಟ್ ನಲ್ಲಿ ಅಮಿತಾಬ್ ಫೋಟೊಶಾಪ್ ಮಾಡಲ್ಪಟ್ಟ ಭಾರತದ ಫೋಟೊವನ್ನು ಟ್ವೀಟ್ ಮಾಡಿದ್ದರು. ಉಪಗ್ರಹದಿಂದ ತೆಗೆದಂತೆ ಕಾಣುವ ಈ ಫೋಟೊದಲ್ಲಿ ಭಾರತ ಹೊಳೆಯುತ್ತಿದೆ.

ಬಚ್ಚನ್ ರ ಈ ಟ್ವೀಟ್ ಬಗ್ಗೆ ಟ್ವಿಟರಿಗರ ಆಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಬಾಲಿವುಡ್ ನಟನ ಕಾಲೆಳೆದಿದ್ದಾರೆ.

"ಶಾಂತರಾಗಿ ಅಂಕಲ್, ಅದು ಫೋಟೊಶಾಪ್ ಚಿತ್ರ' ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು "ಇದು ನನ್ನ ಸ್ನೇಹಿತ ಫೋಟೊಶಾಪ್ ನಲ್ಲಿ ಮಾಡಿದ ಫೋಟೊ. ದಯವಿಟ್ಟು ಅಂಧರಾಗಬೇಡಿ' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News