ಈ ದೇಶದಲ್ಲಿ ಗುಣಮುಖರಾದವರಲ್ಲಿ ಮತ್ತೆ ಕೊರೋನ: ಆತಂಕದಲ್ಲಿ ವೈದ್ಯಲೋಕ

Update: 2020-04-06 17:48 GMT

 ಸೋಲ್,ಎ.6: ಕೋವಿಡ್-19 ಸೋಂಕು ರೋ ತಗಲಿದ ಬಳಿಕ ಚಿಕಿತ್ಸೆ ಪಡೆೆದು ಗುಣಮುಖರಾದ 51 ಮಂದಿಗೆ ಮತ್ತೆ ರೋಗಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದ್ದು, ವೈದ್ಯಕೀಯ ತಜ್ಞರನ್ನು ಆತಂಕಕ್ಕೀಡು ಮಾಡಿದೆ.

ಕೊರೋನದಿಂದ ಗುಣಮುಖರಾದವರ ದೇಹದಲ್ಲಿ ಕೊರೋನ ವೈರಸ್ ಮತ್ತೆ ಸಕ್ರಿಯವಾದ ಪರಿಣಾಮವಾಗಿ ಈ ಫಲಿತಾಂಶ ಬಂದಿರಬಹುದೆಂದು ವೈದ್ಯಕೀಯ ತಜ್ಞರು ಸಂದೇಹ ವ್ಯಕ್ತ ಪಡಿಸಿದ್ದಾರೆ. ದ.ಕೊರಿಯದ ಡಾಯೆಗು ಹಾಗೂ ಉತ್ತರ ಗೆಯೊಂಗ್‌ಸಾಂಗ್ ಪ್ರಾಂತದ ಆಸುಪಾಸಿನಲ್ಲಿ ಪ್ರದೇಶಗಳಲ್ಲಿ ಕರೋನ ಸೋಂಕಿತರು ಗುಣಮುಖರಾಗಿ ಕ್ವಾರಂಟೈನ್‌ನಿಂದ ಬಿಡುಗಡೆಯಾದ ಆನಂತರ ಅವರ ತಪಾಸಣೆಯಲ್ಲಿ ವೈರಸ್ ಪಾಸಿಟಿವ್ ಆಗಿರುವುದು ಕಂಡುಬಂದಿದೆ ಎಂದು ಯೊನ್‌ಹ್ಯಾಪ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಜನರನ್ನು ಸೋಂಕುಮುಕ್ತಗೊಳಿಸಿದರೂ ಕೂಡಾ ಅವರ ದೇಹದಲ್ಲಿ ವೈರಸ್ ಮತ್ತೆ ಸಕ್ರಿಯವಾಗುವ ಸಾಧ್ಯತೆಗಳು ಅಧಿಕವಾಗಿವೆ ಎಂದು ಕೊರಿಯದ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರದ ಮಹಾನಿರ್ದೇಶಕ ಇಯೂನ್ ಕಿಯೊಂಗ್ ತಿಳಿಸಿದ್ದಾರೆ.

  24 ತಾಸುಗಳ ಅವಧಿಯಲ್ಲಿ ಕೋವಿಡ್-19 ಪೀಡಿತ ರೋಗಿಗಳಿಗೆ ಎರಡು ಸಲ ಪರೀಕ್ಷೆಗಳನ್ನು ನಡೆಸಿದಾಗ ನೆಗೆಟಿವ್ ಫಲಿತಾಂಶ ಪ್ರದರ್ಶಿಸಿದಲ್ಲಿ ಆತನನ್ನು ರೋಗಮುಕ್ತನೆಂದು ಪರಿಗಣಿಸಲಾಗುತ್ತದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News