ಕೊರೋನ ಹಾವಳಿ ತಡೆಗೆ ಜಪಾನ್‌ನಲ್ಲಿ ತುರ್ತುಸ್ಥಿತಿ?

Update: 2020-04-06 17:54 GMT

ಟೋಕಿಯೋ,ಎ.6: ಶರವೇಗದಿಂದ ಹರಡುತ್ತಿರುವ ಕೊರೋನ ವೈರಸ್ ಸೋಂಕಿಗೆ ಕಡಿವಾಣ ಹಾಕಲು ಮಂಗಳವಾರದಿಂದ ಜಪಾನ್ 6 ತಿಂಗಳ ಅವಧಿಗೆ ತುರ್ತುಪರಿಸ್ಥಿತಿ ಘೋಷಿಸುವ ಸಾಧ್ಯತೆಯಿದೆಯೆಂದು ಮಾಧ್ಯಮವರದಿಯೊಂದು ತಿಳಿಸಿದೆ. ದೇಶದ ಆರ್ಥಿಕತೆಗೆ ಕೊರೋನ ವೈರಸ್ ನೀಡಿರುವ ಹೊಡೆತಕ್ಕೆ ಉಪಶಮನವಾಗಿ ಅದು ಹೊಸ ಪ್ಯಾಕೇಜನ್ನು ಘೋಷಿಸುವ ಸಾಧ್ಯತೆಯಿದೆ.

   ಜಪಾನ್‌ನಲ್ಲಿ ಇದುವರೆಗೆ 350 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು, 85 ಮಂದಿ ಅಸುನೀಗಿದ್ದಾರೆ. ಕೊರೋನ ಸೋಂಕಿನ ಹಾಟ್‌ಸ್ಫಾಟ್‌ಗಳೆಂದೇ ಬಣ್ಣಿಸಲಾಗಿರುವ ಇಟಲಿ, ಸ್ಪೇನ್ ಹಾಗೂ ಅಮೆರಿಕಗಳಿಗೆ ಹೋಲಿಸಿದರೆ ಜಪಾನ್‌ನಲ್ಲಿ ಸೋಂಕಿತರು ಹಾಗೂ ಸಾವನ್ನಪ್ಪಿದವರ ಸಂಖ್ಯೆ ದೊಡ್ಡದೇನಲ್ಲವಾದರೂ, ಟೋಕಿಯೊದಲ್ಲಿ 1 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣ ಗಳಿರುವುದು ಜಪಾನ್ ಆಡಳಿತಕ್ಕೆ ಚಿಂತೆ ಮೂಡಿಸಿದೆ.

  ತುರ್ತುಪರಿಸ್ಥಿತಿ ಹೇರಿದಲ್ಲಿ ಜನರು ಮನೆಯೊಳಗೆ ಉಳಿದುಕೊಳ್ಳುವಂತೆ ಹಾಗೂ ಉದ್ಯಮ ವ್ಯವಹಾರಗಳನ್ನು ಸ್ಥಗಿತಗೊಳಿಸುವುದಕ್ಕಾಗಿ ಜನತೆಗೆ ಕರೆ ನೀಡುವುದಕ್ಕೆ ಪ್ರಾಂತೀಯ ಗವರ್ವರ್‌ಗಳಿಗೆ ಹಾಗೂ ಅಧಿಕಾರಿಗಳಿಗೆ ಅಧಿಕಾರ ದೊರೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News