ವಿದೇಶ ವ್ಯವಹಾರ ಇಲಾಖೆಯ ವಕ್ತಾರರಾಗಿ ಅನುರಾಗ್ ಶ್ರೀವಾಸ್ತವ ಅಧಿಕಾರ ಸ್ವೀಕಾರ

Update: 2020-04-06 18:09 GMT
ಫೋಟೊ ಕೃಪೆ: twitter.com/MEAIndia/photo

ಹೊಸದಿಲ್ಲಿ, ಎ.6: ಹಿರಿಯ ರಾಜತಂತ್ರಜ್ಞ ಅನುರಾಗ್ ಶ್ರೀವಾಸ್ತವ ಅವರು ವಿದೇಶ ವ್ಯವಹಾರ ಇಲಾಖೆಯ ವಕ್ತಾರರಾಗಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಇದುವರೆಗೆ ಈ ಹುದ್ದೆಯಲ್ಲಿದ್ದ ರವೀಶ್ ಕುಮಾರ್ ಅವರ ಸ್ಥಾನದಲ್ಲಿ ಅನುರಾಗ್ ಶ್ರೀವಾಸ್ತವರನ್ನು ನೇಮಿಸಲಾಗಿದೆ. 1999ರ ಬ್ಯಾಚ್‌ನ ಭಾರತೀಯ ವಿದೇಶಿ ಸೇವಾ ಅಧಿಕಾರಿಯಾಗಿರುವ ಶ್ರೀವಾಸ್ತವ ಇಥಿಯೋಪಿಯಾದಲ್ಲಿ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜಿನೇವಾದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ನಿಯೋಗದಲ್ಲಿ ಕಾರ್ಯನಿರ್ವಹಿಸಿದ್ದ ಶ್ರೀವಾಸ್ತವ ಶ್ರೀಲಂಕಾದಲ್ಲಿ ಭಾರತೀಯ ಹೈಕಮಿಷನ್‌ನ ರಾಜಕೀಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

ಭಾರತದ ವಿದೇಶ ವ್ಯವಹಾರ ಇಲಾಖೆಯ ವಕ್ತಾರರಾಗಿ ಕಾರ್ಯನಿರ್ವಹಿಸುವ ಗೌರವ ಮತ್ತು ಸುಯೋಗ ದೊರಕಿದೆ. ಈ ಹೊಸ ಹುದ್ದೆಯಲ್ಲಿ ನನ್ನ ಕರ್ತವ್ಯವನ್ನು ಜವಾಬ್ದಾರಿಯಿಂದ ನಿಭಾಯಿಸುವ ವಿಶ್ವಾಸವಿದೆ ಎಂದು ಶ್ರೀವಾಸ್ತವ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News