ಭಾರತಕ್ಕೆ ಟ್ರಂಪ್ ಬೆದರಿಕೆ: ಶಶಿ ತರೂರ್ ಆಕ್ರೋಶ

Update: 2020-04-07 07:41 GMT

ಹೊಸದಿಲ್ಲಿ, ಎ.7: ಮಲೇರಿಯಾ ನಿರೋಧಕ ಔಷಧ ಪೂರೈಕೆ ವಿಚಾರದಲ್ಲಿ ಭಾರತದ ವಿರುದ್ಧ ಪ್ರತೀಕಾರದ ಮಾತುಗಳನ್ನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ಡ್ ಟ್ರಂಪ್ ಅವರ ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಕಿಡಿಕಾರಿದ್ದಾರೆ. ಒಂದು ದೇಶದ ವಿರುದ್ಧ ಬೆದರಿಕೆ ಹಾಕುವುದನ್ನು ನಾನು ಈ ವರೆಗೆ ನೋಡಿಯೇ ಇಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಅಧೀನ ಪ್ರಧಾನ ಕಾರ್ಯದರ್ಶಿಯಾಗಿಯೂ ಹಲವು ವರ್ಷಸೇವೆ ಸಲ್ಲಿಸಿರುವ ಸಂಸದ ಶಶಿ ತರೂರ್ ಅವರು, ಟ್ರಂಪ್ ಹೇಳಿಕೆ ಕುರಿತು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

"ದೇಶವೊಂದರ ಅಥವಾ ಸರ್ಕಾರವೊಂದರ ಮುಖ್ಯಸ್ಥರೊಬ್ಬರು ನೇರವಾಗಿ ಇನ್ನೊಂದು ದೇಶಕ್ಕೆ ಹೀಗೆ ಬೆದರಿಕೆ ಹಾಕುವುದನ್ನು ಜಾಗತಿಕ ವ್ಯವಹಾರಗಳ ನನ್ನ ದಶಕಗಳ ಅನುಭವದಲ್ಲಿ ಎಂದಿಗೂ ಕೇಳಿಯೇ ಇರಲಿಲ್ಲ. ಹೈಡ್ರಾಕ್ಸಿಕ್ಲೋರೊಕ್ವಿನ್ ವಿಚಾರದಲ್ಲಿ ಭಾರತ ಪೂರೈಕೆ ರಾಷ್ಟ್ರ. ಅದು ನಿಮಗೆ ಪೂರೈಕೆಯಾಗುವುದು ಭಾರತ ಮಾರಾಟ ಮಾಡಿದಾಗ ಮಾತ್ರ'' ಎಂದು ತರೂರ್ ಅಮೆರಿಕದ ಅಧ್ಯಕ್ಷರಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News