ರಾಜಸ್ತಾನ: ಕೊರೋನ ಸೋಂಕಿತರ ಸಂಖ್ಯೆ 325ಕ್ಕೆ

Update: 2020-04-07 17:53 GMT

ಜೈಪುರ, ಎ.7: ಮಂಗಳವಾರ ರಾಜಸ್ತಾನದಲ್ಲಿ 24 ಕೊರೋನ ಸೋಂಕು ಪ್ರಕರಣ ದೃಢಪಡುವುದರೊಂದಿಗೆ ರಾಜ್ಯದಲ್ಲಿ ಈ ಸಾಂಕ್ರಾಮಿಕ ರೋಗ ಸೋಂಕಿತರ ಸಂಖ್ಯೆ 325ಕ್ಕೇರಿದೆ. ಮಂಗಳವಾರ ಜೋಧ್‌ಪುರದಲ್ಲಿ 9, ಜೈಸಲ್ಮೇರ್‌ನಲ್ಲಿ 7, ಬನ್ಸ್‌ವಾರಾದಲ್ಲಿ 4, ಜೈಪುರದಲ್ಲಿ 3 ಮತ್ತು ಚುರು ಗ್ರಾಮದಲ್ಲಿ 1 ಪ್ರಕರಣ ದೃಢಪಟ್ಟಿದೆ. ಜೈಸಲ್ಮೇರ್‌ನಲ್ಲಿ ವರದಿಯಾಗಿರುವ ಸೋಂಕು ಪ್ರಕರಣ ಬಿಕಾನೇರ್‌ನಲ್ಲಿ ದಾಖಲಾಗಿರುವ ಸೋಂಕು ಪ್ರಕರಣಕ್ಕೆ ಸಂಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News