ಕಿಡಿಗೇಡಿ ಕೃತ್ಯ: 'ರವಿವಾರ 5 ಗಂಟೆಗೆ ಪ್ರಧಾನಿಗೆ ಗೌರವ ಸಲ್ಲಿಸಬೇಕು' ಎಂಬ ಕರೆಯ ಬಗ್ಗೆ ಮೋದಿ

Update: 2020-04-08 14:12 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವ ಸಲ್ಲಿಸುವ ಸಲುವಾಗಿ ರವಿವಾರ 5 ಗಂಟೆಗೆ 'ನಿಂತು ಚಪ್ಪಾಳೆ' ತಟ್ಟಬೇಕು  ಎಂದು ಕರೆ ನೀಡಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಪೋಸ್ಟ್ ಗಳ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, "ಇದು ಕಿಡಿಗೇಡಿಗಳ ಕೃತ್ಯದಂತೆ ಕಾಣುತ್ತಿದೆ" ಎಂದಿದ್ದು, ಕೊರೋನ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಬಡವರಿಗೆ ಸಹಾಯ ಮಾಡುತ್ತಾ ಪ್ರೀತಿ ತೋರ್ಪಡಿಸಬೇಕು ಎಂದಿದ್ದಾರೆ.

ರವಿವಾರ ಸಂಜೆ 5 ಗಂಟೆಗೆ ಮನೆಯ ಬಾಲ್ಕನಿಗಳಲ್ಲಿ ನಿಂತು ಪ್ರಧಾನಿಗೆ ಚಪ್ಪಾಳೆ ತಟ್ಟಬೇಕು ಎಂದು ಕರೆ ನೀಡಿದ್ದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. "ಈ ವ್ಯಕ್ತಿ ನಮಗಾಗಿ ಮತ್ತು ನಮ್ಮ ದೇಶಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ" ಎಂದು ಅದರಲ್ಲಿ ಬರೆಯಲಾಗಿತ್ತು.

"5 ನಿಮಿಷಗಳ ಕಾಲ ಮೋದಿಯವರಿಗೆ ಗೌರವ ಸಲ್ಲಿಸಬೇಕು ಎಂದು ಕ್ಯಾಂಪೇನ್ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಮೋದಿಯನ್ನು ವಿವಾದಕ್ಕೆ ಎಳೆದು ತರಲು ಮಾಡಿದ ಕಿಡಿಗೇಡಿ ಕೃತ್ಯ ಎನ್ನುವುದು ಮೊದಲ ನೋಟದಲ್ಲೇ ಮನದಟ್ಟಾಗಿದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News