ಫ್ಯಾಕ್ಟ್ ಚೆಕ್: ತಬ್ಲೀಗಿ ಸದಸ್ಯ ನಗ್ನನಾಗಿ ಓಡಾಡುತ್ತಿದ್ದಾನೆ ಎನ್ನುವ ವಿಡಿಯೋ ಹಿಂದಿನ ಅಸಲಿಯತ್ತೇನು?

Update: 2020-04-08 18:01 GMT

ಕೊರೋನ ವೈರಸ್ ಐಸೊಲೇಶನ್ ವಾರ್ಡ್ ನಲ್ಲಿ ತಬ್ಲೀಗಿ ಜಮಾತ್ ಸದಸ್ಯನೊಬ್ಬ ನಗ್ನನಾಗಿ ತಿರುಗಾಡುತ್ತಿದ್ದಾನೆ ಎಂದು ಆರೋಪಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿರುವ ವ್ಯಕ್ತಿಯ ಮೈಯೆಲ್ಲಾ ರಕ್ತಸಿಕ್ತವಾಗಿದೆ. ಇನ್ನೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕನ್ನಡಿಯ ಕಿಟಕಿಗಳನ್ನು ತಲೆ ಮತ್ತು ಬರಿ ಕೈಗಳಿಂದ ಒಡೆಯುತ್ತಿದ್ದಾನೆ. ಗಾಝಿಯಾಬಾದ್ ನ ಆಸ್ಪತ್ರೆಯಲ್ಲಿ ತಬ್ಲೀಗಿಗಳು ನಗ್ನರಾಗಿ ತಿರುಗಾಡುತ್ತಿದ್ದಾರೆ ಎನ್ನುವ ಸುಳ್ಳುಗಳ ನಡುವೆ ಈ ವಿಡಿಯೋ ವೈರಲ್ ಆಗುತ್ತಿದೆ.

ಸತ್ಯಾಂಶವೇನು?

ಈ ಬಗ್ಗೆ altnews.in ಫ್ಯಾಕ್ಟ್ ಚೆಕ್ ನಡೆಸಿದ್ದು, ಇದು 2019ರಲ್ಲಿ ನಡೆದ ಘಟನೆಯಾಗಿದ್ದು ಪಾಕಿಸ್ತಾನದ್ದು ಎನ್ನುವುದು ಖಚಿತಗೊಂಡಿದೆ. 'ನಗ್ನನಾಗಿ ವ್ಯಕ್ತಿಯೊಬ್ಬ ಮಸೀದಿಗೆ ಪ್ರವೇಶಿಸಿದ್ದಾನೆ' ಎನ್ನುವ ತಲೆಬರಹದೊಂದಿಗೆ ಯುಟ್ಯೂಬ್ ನಲ್ಲಿ ಈ ವಿಡಿಯೋ ಇದೆ. 2019ರ ಆಗಸ್ಟ್ 26ರಂದು ಅಪ್ಲೋಡ್ ಮಾಡಲಾಗಿದೆ.

ಈ ಘಟನೆ 2019ರಲ್ಲಿ ಕರಾಚಿಯಲ್ಲಿ ನಡೆದಿದೆಯೇ ಹೊರತು ಭಾರತದಲ್ಲ ಎನ್ನುವುದು ಖಚಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News