ಆರು ಲಕ್ಷ ಮಾಸ್ಕ್, 40,000 ಲೀ.ಗೂ ಅಧಿಕ ಸ್ಯಾನಿಟೈಸರ್ ತಯಾರಿಸಿದ ಭಾರತೀಯ ರೈಲ್ವೆ

Update: 2020-04-09 16:56 GMT

ಹೊಸದಿಲ್ಲಿ, ಎ.9: ಸುಮಾರು ಆರು ಲಕ್ಷ ಮುಖಗವುಸುಗಳು ಮತ್ತು 40,000 ಲೀ.ಗೂ ಅಧಿಕ ಸ್ಯಾನಿಟೈಸರ್ ತಯಾರಿಸುವ ಮೂಲಕ ಭಾರತೀಯ ರೈಲ್ವೆಯು ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ತನ್ನ ಪ್ರಯತ್ನಗಳನ್ನು ಹೆಚ್ಚಿಸಿದೆ.

ಎ.7ರವರೆಗೆ 5,82,317 ಮರು ಬಳಸಬಹುದಾದ ಮಾಸ್ಕ್‌ಗಳು ಮತ್ತು 41,882 ಲೀ. ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ತಯಾರಿಸಲಾಗಿದೆ ಎಂದು ಭಾರತೀಯ ರೈಲ್ವೆಯು ಹೇಳಿಕೆಯಲ್ಲಿ ತಿಳಿಸಿದೆ.

ಎಲ್ಲ ಕಾರ್ಯಾಚರಣೆ ಮತ್ತು ನಿರ್ವಹಣಾ ಸಿಬ್ಬಂದಿ ದಿನದ 24 ಗಂಟೆಯೂ ಕೆಲಸವನ್ನು ನಿರ್ವಹಿಸುತ್ತಿರುವುದರಿಂದ ಅವರ ಸುರಕ್ಷತೆಯನ್ನು ಖಚಿತಪಡಿಸಲು ಮತ್ತು ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ವಿವಿಧ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News