ಲಾಕ್‌ಡೌನ್: ಮಾರ್ಚ್‌ನಲ್ಲಿ ದೇಶಾದ್ಯಂತ ಇಂಧನ ಬಳಕೆಯಲ್ಲಿ ಶೇ.18ರಷ್ಟು ಕುಸಿತ

Update: 2020-04-09 16:58 GMT

ಹೊಸದಿಲ್ಲಿ, ಎ.9: ಸಾರಿಗೆ ಮೇಲೆ ನಿರ್ಬಂಧ ಮತ್ತು 21 ದಿನಗಳ ಲಾಕ್‌ಡೌನ್ ಪರಿಣಾಮವಾಗಿ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಇಂಧನ ಬಳಕೆಯಲ್ಲಿ ಶೇ.18ರಷ್ಟು ಕುಸಿತವಾಗಿದೆ. ಇದು ಕಳೆದೊಂದು ದಶಕದಲ್ಲಿ ಇಂಧನ ಬಳಕೆಯಲ್ಲಿನ ಅತ್ಯಂತ ತೀವ್ರ ಇಳಿಕೆಯಾಗಿದೆ.

ಡೀಸೆಲ್, ಪೆಟ್ರೋಲ್ ಮತ್ತು ವಿಮಾನ ಇಂಧನಗಳಿಗೆ ಬೇಡಿಕೆ ಇಳಿದಿದ್ದರಿಂದ ಮಾರ್ಚ್‌ನಲ್ಲಿ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಶೇ.17.79ರಷ್ಟು ಇಳಿಕೆಯಾಗಿದ್ದು, 16.08 ಮಿ.ಟನ್‌ಗಳಿಗೆ ಕುಸಿದಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಡೀಸೆಲ್‌ಗೆ ಬೇಡಿಕೆ ಶೇ.24.23ರಷ್ಟು ಕುಸಿದಿದ್ದು ಬಳಕೆಯ ಪ್ರಮಾಣ 5.65 ಮಿ.ಟ.ಗೆ ಇಳಿದಿದ್ದರೆ, ಪೆಟ್ರೋಲ್‌ಗೆ ಬೇಡಿಕೆ ಶೇ.16.37ರಷ್ಟು ಕುಸಿದಿದ್ದು 2.15 ಮೀ. ಬಳಕೆಯಾಗಿದೆ. ಆದರೆ ಉದ್ಯಮವು ಸಂಪೂರ್ಣವಾಗಿ ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಭಾರತೀಯ ರಿಫೈನರಿಗಳು ಕನಿಷ್ಠ ಇನ್ನೂ ಎರಡು ವಾರಗಳ ಕಾಲ ಇಂಧನಗಳ ರಫ್ತನ್ನು ಮುಂದುವರಿಸುವ ಸಾಧ್ಯತೆಯಿದೆ.

ಅಗತ್ಯವಲ್ಲದ ಸರಕುಗಳ ಸಾಗಾಣಿಕೆಗೆ ಅನುಮತಿ ಸೇರಿದಂತೆ ಸರಕಾರದ ಇತ್ತೀಚಿನ ಕ್ರಮಗಳಿಂದಾಗಿ ಭಾರತದ ಇಂಧನ ಬಳಕೆ ಮುಂದಿನ 10-15 ದಿನಗಳಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆಯಿದೆ. ರಿಫೈನರಿಗಳ ಕಾರ್ಯಾಚಣೆ ನಿಲ್ಲದಿರಲು ಇಂಧನಗಳನ್ನು ರಫ್ತು ಮಾಡುವುದು ಅಗತ್ಯವಾಗಿದೆ ಎಂದು ಭಾರತ ಪೆಟ್ರೋಲಿಯಂ ರಿಫೈನರಿಗಳ ಮುಖ್ಯಸ್ಥ ಆರ್.ರಾಮಚಂದ್ರನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News