ಲಾಕ್‌ಡೌನ್ ಬಳಿಕ ಮದ್ಯ ವ್ಯಸನಿಗಳಲ್ಲಿ ಖಿನ್ನತೆಯ ಪ್ರಕರಣ ಹೆಚ್ಚಳ: ತಜ್ಞರ ಕಳವಳ

Update: 2020-04-09 17:22 GMT

ಚೆನ್ನೈ, ಎ.9: ಕೊರೋನಾ ಹಾವಳಿ ತಡೆಗೆ ದೇಶಾದ್ಯಂತ ಘೋಷಿಸಿರುವ ಲಾಕ್‌ಡೌನ್‌ನಿಂದಾಗಿ ಮದ್ಯಸಿಗದೆ ಇರುವ ಕಾರಣದಿಂದಾಗಿ ತಮಿಳುನಾಡಿನಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಮದ್ಯಪಾನ ವ್ಯಸನಿಗಳು ಸಾವನ್ನಪ್ಪಿದ ಪ್ರಕರಣಗಳು ವರದಿಯಾಗಿವೆ.

ಈ ಮಧ್ಯೆ ಮದ್ಯ ಅಲಭ್ಯತೆಯಿಂದಾಗಿ ಮದ್ಯಪಾನ ವ್ಯಸನಿಗಳು ಅಸೌಖ್ಯದ ಲಕ್ಷಣಗಳನ್ನು ಪ್ರದರ್ಶಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆಯೂ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವು ಮದ್ಯಪಾನ ವ್ಯಸನಿಗಳು ಖಿನ್ನತೆಗೂ ಒಳಗಾಗಿದ್ದು, ಕೌನ್ಸೆಲಿಂಗ್ ಸೇರಿದಂತೆ ಅವರ ಬಗ್ಗೆ ತುರ್ತು ವೈದ್ಯಕೀಯ ಗಮ ಹರಿಸಬೇಕಾದ ಅಗತ್ಯವಿದೆಯೆಂದು ಅವರು ಅಭಿಪ್ರಾಯಿಸಿದ್ದಾರೆ.

ಮದ್ಯಪಾನಿಗಳ ಆರೋಗ್ಯ ಸಮಸ್ಯೆಯ ಪ್ರಕರಣಗಳು ಅಪಾಯಕಾರಿ ಪ್ರಮಾಣವನ್ನು ತಲುಪುವ ಮುನ್ನ ಅವನ್ನು ಪ್ರಾಥಮಿಕ ಆರೋಗ್ಯಪಾಲನಾ ಮಟ್ಟದಲ್ಲಿಯೇ ಬಗೆಹರಿಸುವ ಅಗತ್ಯವಿದೆಯೆಂದು ಚೆನ್ನೈ ಮೂಲದ ಮನೋರೋಗ ತಜ್ಞ ಎಸ್.ನಂಬಿ ಹೇಳುತ್ತಾರೆ.

ಇಂತಹ ವ್ಯಕ್ತಿಗಳನ್ನು ಕೌನ್ಸೆಲಿಂಗ್‌ಗೆ ಒಳಪಡಿಸುವ ಅಗತ್ಯವನ್ನು ಕೂಡಾ ಅವರು ಶಿಫಾರಸು ಮಾಡಿದ್ದಾರೆ. ದಿಢೀರನೆ ಮದ್ಯಸಾರದ ಅಲಭ್ಯತೆಯಿಂದಾಗಿ ವ್ಯಸನಿಗಳಲ್ಲಿ ಅಸೌಖ್ಯದ ಲಕ್ಷಣಗಳನ್ನು ಕಂಡುಬರುತ್ತವೆ. ಅಂತಹವರಲ್ಲಿ ಸಾಮಾನ್ಯ ಪ್ರಕರಣಗಳಲ್ಲಿ ನಡುಗುವಿಕೆ ಹಾಗೂ ಮದ್ಯಕ್ಕಾಗಿ ಯಾಚನೆಯ ಪ್ರವೃತ್ತಿ ಕಂಡುಬರುತ್ತದೆ. ಶೇ.15ರಷ್ಟು ಪ್ರಕರಣಗಳಲ್ಲಿ ಮದ್ಯವ್ಯಸನಿಗಳು ಖಿನ್ನತೆಗೆ ಒಳಗಾಗುತ್ತಾರೆ ಎಂದವರು ತಿಳಿಸಿದ್ದಾರೆ. ಇಂತಹ ಪ್ರಕರಣದಲ್ಲಿ ವ್ಯಕ್ತಿಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ, ಇಲ್ಲದೆ ಹೋದಲ್ಲಿ ಆತ ತನ್ನ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯಿರುತ್ತದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್ ಬಳಿಕ ಮದ್ಯಸಿಗದೆ ಇದ್ದುದಕ್ಕಾಗಿ ತಮಿಳುನಾಡಿನ ಚೆಂಗಲ್ಪಟ್ಟುವನಲ್ಲಿ ಮೂವರು ವಾರ್ನಿಶ್ ಅನ್ನು ನೀರಿನೊಂದಿಗೆ ಮಿಶ್ರ ಮಾಡಿ ಕುಡಿದುಗಪಿಂಗ ಸಾವನ್ನಪ್ಪಿದ್ದರು. ಪುದುಕೋಟ್ಟೈ ಜಿಲ್ಲೆಯಲ್ಲಿಯೂ ಮೂವರು ಶೇವಿಂಗ್ ಲೋಶನ್ ಅನ್ನು ತಂಪುಪಾನೀಯದ ಜೊತೆ ಮಿಶ್ರ ಮಾಡಿ ಸೇವಿಸಿದ್ದರಿಂದ ಸಾವನ್ನಪ್ಪಿದ್ದರು. ವಿಲ್ಲುಪ್ಪುರಂನಲ್ಲಿ ನಡೆದ ಘಟನೆಯೊಂದರಲ್ಲಿ 65 ವರ್ಷ ವೃದ್ಧನೊಬ್ಬ ಮದ್ಯ ದೊರೆಯದೆ ಬಳಲಿಬಿದ್ದು ಸಾವನ್ನಪ್ಪಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News