ಒಟಿಪಿ, ಪಿನ್ ಯಾರಿಗೂ ನೀಡದಿರಿ: ಗ್ರಾಹಕರಿಗೆ ಬ್ಯಾಂಕ್‌ಗಳ ಎಚ್ಚರಿಕೆ
ಹೊಸದಿಲ್ಲಿ, ಎ.9: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಘೋಷಿಸಿರುವ ‘ಇಎಂಐ ಪಾವತಿ ಮುಂದೂಡಿಕೆ’ ಯೋಜನೆಯನ್ನು ವಂಚಕರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆಯಿದೆಯೆಂದು ಬ್ಯಾಂಕುಗಳು ಗ್ರಾಹಕ ರಿಗೆ ಎಚ್ಚರಿಕೆ ನೀಡಿವೆ ಹಾಗೂ ಓಟಿಪಿ ಹಾಗೂ ಪಿನ್ ಸಂಖ್ಯೆಯಂತಹ ಸೂಕ್ಮ ಮಾಹಿತಿಗಳನ್ನು ಅಪರಿಚಿತರ ಜೊತೆ ಹಂಚಿಕೊಳ್ಳದಂತೆ ಸೂಚಿಸಿದ್ದಾರೆ.
ಜನಸಾಮಾನ್ಯರ ಬ್ಯಾಂಕಿಂಗ್ ವಿವರಗಳನ್ನು ಪಡೆಯಲು ವಂಚಕರು ಹಾಗೂ ಸೈಬರ್ ಕ್ರಿಮಿನಲ್‌ಗಳು ಅನುಸರಿಸುತ್ತಿರುವ ಹೊಸ ಕಾರ್ಯವಿಧಾನಗಳ ಕುರಿತು ಗ್ರಾಹಕರನ್ನು ಎಚ್ಚರಿಸಲು ಕಳೆ ಆಕ್ಸಿಸ್ ಬ್ಯಾಂಕ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಗ್ರಾಹಕರಿಗೆ ಎಸ್‌ಎಂಎಸ್‌ಗಳನ್ನು ಹಾಗೂ ಇಮೇಲ್‌ಗಳ್ನು ಕಳುಹಿಸುತ್ತಿವೆ.
ಬ್ಯಾಂಕ್ ಸಿಬ್ಬಂದಿಯ ಸೋಗಿನಲ್ಲಿ ವಂಚಕರು, ಬ್ಯಾಂಕ್‌ಗ್ರಾಹಕರನ್ನು ಸಂಪರ್ಕಿಸಿ ಅವರ ಇಎಂಐ ಪಾವತಿಗಳನ್ನು ಮುಂದೂಡಲು ನೆರವಾಗುವುದಾಗಿ ಅಮಿಷವೊಡ್ಡುತ್ತಾರೆ ಹಾಗೂ ಗ್ರಾಹಕರ ಬ್ಯಾಂಕ್‌ಖಾತೆಗಳಿಗೆ ಸಂಬಂಧಿಸಿದ ಓಟಿಪಿ,ಸಿವಿವಿ, ಪಾಸ್‌ವಡ್ ಹಾಗೂ ಪಿನ್ ಸಂಖ್ಯೆಯನ್ನು ಕೇಳುತ್ತಾರೆ ಎಂದು ಬ್ಯಾಂಕುಗಳು ಎಚ್ಚರಿಕೆ ನೀಡಿವೆ.
ಒಂದು ವೇಳೆ ಗ್ರಾಹಕರು ಇಂತಹ ಮಾಹಿತಿಗಳನ್ನು ಹಂಚಿಕೊಂಡಲ್ಲಿ, ಅವರ ಬ್ಯಾಂಕಿಂಗ್ ಮಾಹಿತಿಯನ್ನು ವಂಚಕರುಪಡೆದು ಹಣವನ್ನು ದೋಚುತ್ತಾರೆ ಎಂದು ಆ್ಯಕ್ಸಿಸ್ ಬ್ಯಾಂಕ್‌ತಿಳಿಸಿದೆ.
ಲಾಕ್‌ಡೌನ್ ಹೇರಿಕೆಯಿಂದ ಜನಸಾಮಾನ್ಯರ ಮೇಲೆ ಉಂಟಾಗಿರುವ ಅರ್ಥಿಕ ಹೊರೆ ಕಡಿಮೆಗೊಳಿಸಲು ಕೇಂದ್ರ ಸರಕಾರ ಬ್ಯಾಂಕ್ ಗ್ರಾಹಕರಿಗೆ ಮೂರು ತಿಂಗಳ ಅವಧಿಗೆ ಇಎಂಐ ಪಾವತಿ ಮುಂದೂಡಿಕೆಯನ್ನು ಘೋಷಿಸಿತ್ತು.