ರೋಗಿಯಲ್ಲಿ ಕೊರೋನ ವೈರಸ್: ಏಮ್ಸ್‌ನ 30 ಆರೋಗ್ಯ ಕಾರ್ಯಕರ್ತರಿಗೆ ಕ್ವಾರಂಟೈನ್

Update: 2020-04-09 17:30 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಎ.9: ಆಸ್ಪತ್ರೆಯ ನರಶಾಸ್ತ್ರೀಯ ವಿಭಾಗದಲ್ಲಿ ದಾಖಲಾಗಿದ್ದ ರೋಗಿಯಲ್ಲಿ ಕೊರೋನ ಸೋಂಕು ದೃಢಪಟ್ಟ ಬಳಿಕ ವೈದ್ಯರು ಮತ್ತು ನರ್ಸ್‌ಗಳು ಸೇರಿದಂತೆ ದಿಲ್ಲಿಯ ಏಮ್ಸ್‌ನ ಸುಮಾರು 30 ಆರೋಗ್ಯ ಕಾರ್ಯಕರ್ತರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ನರಸಂಬಂಧಿ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ 70ರ ಹರೆಯದ ರೋಗಿ ಬಳಿಕ ಎದೆನೋವು ಮತ್ತು ಉಸಿರಾಟದ ತೊಂದರೆಯ ಬಗ್ಗೆ ದೂರಿಕೊಂಡಿದ್ದರಿಂದ ಎಕ್ಸ್‌ರೇ ತೆಗೆಯಲಾಗಿತ್ತು ಮತ್ತು ಆತನ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆತನಲ್ಲಿ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ರೋಗಿಯನ್ನು ಆಸ್ಪತ್ರೆಯ ಕೋವಿಡ್-19 ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಆತನ ಸಂಪರ್ಕಕ್ಕೆ ಬಂದಿದ್ದ ಹಲವಾರು ವೈದ್ಯರು ಮತ್ತು ನರ್ಸ್‌ಗಳಿಗೆ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದ್ದು, ಈವರೆಗೆ ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News