ಅನಿವಾಸಿ ಕನ್ನಡಿಗರ ಕ್ವಾರೆಂಟೈನ್ ಕೇಂದ್ರವಾಗಿ ದಾರುಲ್ ಇರ್ಶಾದ್ ಸಿದ್ಧ : ಮಾಣಿ ಉಸ್ತಾದ್

Update: 2020-04-11 07:17 GMT
ಮಾಣಿ ಉಸ್ತಾದ್

ಮಾಣಿ : ಅನಿವಾಸಿ ಕನ್ನಡಿಗರನ್ನು ಸರಕಾರವು ತಾಯ್ನಾಡಿಗೆ ಕರೆತರುವುದಾದರೆ ಅವರನ್ನು ಕಾರೆಂಟೈನ್ ಮಾಡಲು ಎಸ್ ವೈ ಎಸ್ ಇಸ್ವಾಬ, ಎಸ್ಸೆಸ್ಸೆಫ್ , ಕೆಸಿಎಫ್ ಮುಂತಾದ ಸ್ವಯಂ ಸೇವಾ ಸಂಘಟನೆಗಳ ಸಹಯೋಗದೊಂದಿಗೆ ದಾರುಲ್ ಇರ್ಶಾದ್ ಅಧೀನದ ಕೆಜಿಎನ್ ಕ್ಯಾಂಪಸ್ ನ‌ ಶಾಲಾ, ಕಾಲೇಜು ಕಟ್ಟಡಗಳನ್ನು ನೀಡಲು ಸಿದ್ಧ ಎಂದು ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಗಳ ಸಾರಥಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿದ್ದಾರೆ.

ಜೀವನೋಪಾಯಕ್ಕಾಗಿ ವಿದೇಶದಲ್ಲಿರುವ ನೂರಾರು ಕನ್ನಡಿಗರು ಕೋರೋನ ಭೀತಿಯಿಂದ ಸಂಕಷ್ಟದಲ್ಲಿದ್ದಾರೆ. ಹಲವು ದೇಶಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅವರ ಸುರಕ್ಷತೆಯನ್ನು ಸರಕಾರವು ಖಚಿತಪಡಿಸಬೇಕೆಂದು ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯ ಪ್ರ.ಕಾರ್ಯದರ್ಶಿಯೂ ಆಗಿರುವ ಮಾಣಿ ಉಸ್ತಾದ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News