×
Ad

ಇಂಡಿಗೊ ಉದ್ಯೋಗಿ ಕೊರೋನ ಸೋಂಕಿಗೆ ಬಲಿ

Update: 2020-04-12 09:25 IST
ಸಾಂದರ್ಭಿಕ ಚಿತ್ರ

ಮುಂಬೈ: ಇಂಡಿಗೊ ವಿಮಾನಯಾನ ಸಂಸ್ಥೆಯ ಉದ್ಯೋಗಿಯೊಬ್ಬರು ಕೊರೋನ ವೈರಸ್ ಸೋಂಕಿನಿಂದ ಚೆನ್ನೈನಲ್ಲಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಇಂಡಿಗೊ ಅಧಿಕೃತವಾಗಿ ಯಾವುದೇ ವಿವರ ನೀಡಿಲ್ಲವಾದರೂ, ಈ ವ್ಯಕ್ತಿ ವಿಮಾನ ನಿರ್ವಹಣೆ ಎಂಜಿನಿಯರ್ ಆಗಿ ಇಂಡಿಗೊದಲ್ಲಿ ಉದ್ಯೋಗದಲ್ಲಿದ್ದರು ಎಂದು ಮೂಲಗಳು ಸ್ಪಷ್ಟಪಡಿಸಿದ್ದಾಗಿ ಪಿಟಿಐ ವರದಿ ಮಾಡಿದೆ. ಸುಮಾರು 55 ವರ್ಷ ವಯಸ್ಸಿನ ಇವರು 2006ರಿಂದ ಇಂಡಿಗೊ ಸಂಸ್ಥೆಯಲ್ಲಿದ್ದರು ಎಂದು ಮೂಲಗಳು ಹೇಳಿವೆ.

ನಮ್ಮ ಉದ್ಯೋಗಿಯೊಬ್ಬರು ಕೋವಿಡ್-19 ವೈರಸ್ ಸೋಂಕಿಗೆ ಚೆನ್ನೈನಲ್ಲಿ ಬಲಿಯಾಗಿರುವುದು ವಿಷಾದನೀಯ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ದೇಶದಲ್ಲಿ ವಿಮಾನಯಾನ ಸಿಬ್ಬಂದಿಯೊಬ್ಬರು ಈ ಸೋಂಕಿಗೆ ಬಲಿಯಾಗಿರುವುದು ಇದೇ ಮೊದಲು.

ಎಲ್ಲ ಇಂಡಿಗೊ ಸಿಬ್ಬಂದಿಗೆ ಇದು ಹೃದಯ ವಿದ್ರಾವಕ ಕ್ಷಣ. ಈ ದುಃಖದ ಪರಿಸ್ಥಿತಿಯಲ್ಲಿ ಅವರ ಕುಟುಂಬದ ಜತೆ ನಾವಿದ್ದೇವೆ. ಅವರ ಹಾಗೂ ಅವರ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ನಾವು ಮನವಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News