ಮಧ್ಯಪ್ರದೇಶ ಸರಕಾರ ಉರುಳಿಸುವಲ್ಲಿ ಬಿಜೆಪಿ ಮಗ್ನವಾಗಿದ್ದರಿಂದ ಲಾಕ್ ಡೌನ್ ತಡ: ಕಮಲ್ ನಾಥ್ ಆರೋಪ

Update: 2020-04-12 12:21 GMT

ಹೊಸದಿಲ್ಲಿ: ಬಿಜೆಪಿಯು ಮಧ್ಯ ಪ್ರದೇಶದ ಕಾಂಗ್ರೆಸ್ ಸರಕಾರವನ್ನು ಉರುಳಿಸುವುದರಲ್ಲೇ ನಿರತವಾಗಿದ್ದರಿಂದ ಲಾಕ್ ಡೌನ್ ಘೋಷಣೆ ತಡವಾಯಿತು ಎಂದು ಮಧ್ಯಪ್ರದೇಶದ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಕಮಲ್ ನಾಥ್ ಗಂಭೀರ ಆರೋಪ ಮಾಡಿದ್ದಾರೆ.

"22  ಕಾಂಗ್ರೆಸ್ ಶಾಸಕರನ್ನು ವಿಮಾನದಲ್ಲಿ ಬೆಂಗಳೂರಿಗೆ ಕರೆದೊಯ್ಯಲಾಯಿತು ಮತ್ತು ರೆಸಾರ್ಟ್ ನಲ್ಲಿ ಇರಿಸಲಾಗಿತ್ತು. ರಾಜ್ಯಪಾಲರು ವಿಶ್ವಾಸಮತಯಾಚನೆ ಬಗ್ಗೆ ಮಾತನಾಡುತ್ತಿದ್ದರು ಮತ್ತು ಈ ಬಗ್ಗೆ ಸುಪ್ರಿಂ ಕೋರ್ಟ್ ಆದೇಶ ನೀಡಿತು. ನನ್ನ 22 ಶಾಸಕರಿಗೆ ಹಿಂದಿರುಗಲು ಅವಕಾಶ ನೀಡದ ಕಾರಣ ನಾನು ಮಾರ್ಚ್ 16ರಂದು ರಾಜೀನಾಮೆ ನೀಡಿದೆ" ಎಂದು ಕಮಲ್ ನಾಥ್ ಹೇಳಿದ್ದಾರೆ.

"ಮಾರ್ಚ್ 23ರಂದು ರಾತ್ರಿ 9 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅದರ ಮರುದಿನ ಲಾಕ್ ಡೌನ್ ಘೋಷಿಸಲಾಯಿತು. ಮಾಜಿ ಕಾಂಗ್ರೆಸ್ ಅಧ್ಯಕ್ಷರು (ರಾಹುಲ್ ಗಾಂಧಿ) ಕೊರೋನ ಬಿಕ್ಕಟ್ಟಿನ ಬಗ್ಗೆ ಒಂದು ತಿಂಗಳ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ ಅವರು ಮಧ್ಯಪ್ರದೇಶ ಸರಕಾರವನ್ನು ಉರುಳಿಸುವ ಯೋಜನೆ ಮಾಡುತ್ತಿದ್ದರು" ಎಂದವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News