ಪತಿಯೊಂದಿಗೆ ಜಗಳವಾಡಿ 5 ಮಕ್ಕಳನ್ನು ನದಿಗೆ ಎಸೆದ ಮಹಿಳೆ
Update: 2020-04-12 22:33 IST
ಭದೋಹಿ: ಪತಿಯೊಂದಿಗೆ ಜಗಳವಾಡಿದ ನಂತರ ಮಹಿಳೆಯೊಬ್ಬಳು ತನ್ನ ಐವರು ಮಕ್ಕಳನ್ನು ಗಂಗಾ ನದಿಗೆ ಎಸೆದ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ನಡೆದಿದೆ.
ಮಕ್ಕಳಿಗಾಗಿ ಹುಡುಕಾಟ ನಡೆಯುತ್ತಿದೆ. ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳಾದ ಮಂಜು ಯಾದವ್ ಮತ್ತು ಆಕೆಯ ಪತಿ ಮೃದುಲ್ ಯಾದವ್ ಒಂದು ವರ್ಷಗಳಿಂದ ಜಗಳವಾಡುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಮಕ್ಕಳನ್ನು ಕೊಲ್ಲಲೆಂದು ಆಕೆ ಐವರನ್ನು ನದಿಗೆಸೆದಳು" ಎಂದವರು ಹೇಳಿದ್ದಾರೆ.