×
Ad

ಕೊರೋನ ವೈರಸ್‌ನ ಮೂಲ ಚೀನಾ ಎಂದು ವಿಶ್ವವೇ ಹೇಳುತ್ತಿದೆ: ಬಿಜೆಪಿ ಶಾಸಕನ ಹೇಳಿಕೆ

Update: 2020-04-12 23:10 IST

ಹೈದರಾಬಾದ್, ಎ.12: ಚೀನಾ ವಿರೋಧಿ ಘೋಷಣೆಯ ಮೂಲಕ ಇತ್ತೀಚೆಗೆ ವಿವಾದ ಹುಟ್ಟುಹಾಕಿದ್ದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್, ಇದೀಗ ಚೀನಾದ ವಿರುದ್ಧ ಮತ್ತೊಂದು ವಾಕ್‌ಪ್ರಹಾರ ನಡೆಸಿದ್ದು, ಕೊರೋನ ವೈರಸ್‌ನ ಮೂಲ ಚೀನಾದ ವುಹಾನ್ ನಗರ ಎಂದು ವಿಶ್ವವೇ ಹೇಳುತ್ತಿದೆ ಎಂದಿದ್ದಾರೆ.

ಶಾಸಕರ ಈ ಹೇಳಿಕೆಗೆ ಚೀನಾದ ಕೌನ್ಸೆಲರ್ ಲಿಯು ಬಿಂಗ್ ತೀವ್ರ ಆಕ್ಷೇಪ ಸೂಚಿಸಿ ರಾಜಾಸಿಂಗ್‌ಗೆ ಪತ್ರ ಬರೆದಿದ್ದು, ಕೊರೋನ ವೈರಸ್ ಚೀನಾದ ವೈರಸ್ ಎಂಬ ಹೇಳಿಕೆ ಚೀನಾಕ್ಕೆ ಕಳಂಕ ತರುವ ಕ್ರಮವಾಗಿದೆ ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ಶಾಸಕ ರಾಜಾ ಸಿಂಗ್, ಇದು ತನ್ನೊಬ್ಬನ ಅಭಿಪ್ರಾಯವಲ್ಲ. ಹೀಗೆಂದು ಇಡೀ ವಿಶ್ವವೇ ಭಾವಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಇದು ಕೊರೋನ ವೈರಸ್ ಅಲ್ಲ, ಚೀನಾದ ವೈರಸ್ ಎಂದಿದ್ದರು. ಈ ಮಾರಣಾಂತಿಕ ವೈರಸ್‌ನ ಕಪಿಮುಷ್ಟಿಯಿಂದ ವಿಶ್ವವನ್ನು ರಕ್ಷಿಸಲು ಶೀಘ್ರವೇ ವಿಶ್ವಆರೋಗ್ಯ ಸಂಸ್ಥೆ ಔಷಧವನ್ನು ಅಭಿವೃದ್ಧಿಪಡಿಸಬೇಕು ಮತ್ತು ಚೀನಾ ಸರಕಾರ ಇದಕ್ಕೆ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೊರೋನ ವೈರಸ್ ಸೋಂಕು ವಿಶ್ವದಾದ್ಯಂತ 1 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದು ಸುಮಾರು 1.6 ಮಿಲಿಯನ್ ಜನರಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News