ಮೇ 3ರ ತನಕ ದೇಶದಲ್ಲಿ ರೈಲು ಸಂಚಾರವಿಲ್ಲ
Update: 2020-04-14 11:36 IST
ಹೊಸದಿಲ್ಲಿ, ಎ.14: ದೇಶದಲ್ಲಿ ಲಾಕ್ ಡೌನ್ ಕಾರಣದಿಂದಾಗಿ ಮೇ 3ರ ತನಕ ದೇಶದಲ್ಲಿ ಪ್ರಯಾಣಿಕರ ರೈಲುಗಳ ಓಡಾಟವಿರುವುದಿಲ್ಲ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಕೊರೋನ ವೈರಸ್‌ನಿಂದಾಗಿ ದೇಶದಲ್ಲಿ 21 ದಿನಗಳವರೆಗೆ ಜಾರಿಗೆ ತರಲಾದ ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಿದ ನಂತರ ರೈಲ್ವೆ ಪ್ರಕಟಣೆ ನೀಡಿದೆ.