ಜಾರ್ಖಂಡ್ ಆಸ್ಪತ್ರೆಯಲ್ಲಿ ಕೊರೋನ ರೋಗಿಗಳಿಗೆ ಆಹಾರ, ಔಷಧಿ ನೀಡಲಿವೆ ರೋಬೋಟ್‍ಗಳು

Update: 2020-04-14 12:41 GMT
ಸಾಂದರ್ಭಿಕ ಚಿತ್ರ

ರಾಂಚಿ : ಜಾರ್ಖಂಡ್‍ನ ಪಶ್ಚಿಮ ಸಿಂಗ್‍ಭುಮ್ ಜಿಲ್ಲೆಯ ಎರಡು ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳಿಗೆ ರೋಬೋಟ್‍ಗಳು ಔಷಧಿ ಮತ್ತು ಆಹಾರ ಪೂರೈಸಲಿವೆ. ವೈದ್ಯರು ಹಾಗೂ ಇತರ ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಕೊರೋನ ಸೋಂಕು ತಗಲದಂತೆ ನೋಡಿಕೊಳ್ಳುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲಾ ಅಭಿವೃದ್ಧಿ ಕಮಿಷನರ್ ಆದಿತ್ಯ ರಂಜನ್ ಅವರು ಅಭಿವೃದ್ಧಿ ಪಡಿಸಿರುವ ಈ ರಿಮೋಟ್ ಕಂಟ್ರೋಲ್ಡ್ ಕೊಬೋಟ್-ರೊಬೋಟಿಕ್ಸ್ ಮನಷ್ಯರ ಸಹಾಯವಿಲ್ಲದೆ ರೋಗಿಗಳಿಗೆ ಆಹಾರ ಮತ್ತು ಔಷಧಿ ಪೂರೈಕೆ ಮಾಡಲಿವೆ.

ಪ್ರತಿಯೊಂದು ಹಾಸಿಗೆಯನ್ನೂ ಕೊಠಡಿಯಂತೆ ವಿನ್ಯಾಸಗೊಳಿಸಲಾಗಿದೆ ಹಾಗೂ ಇಲ್ಲಿ ರೊಬೋಟ್‍ಗಳು ತಮ್ಮ ಸೇವೆಗೈಯ್ಯಲಿವೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News