ಟೂರ್ ಡೆ ಫ್ರಾನ್ಸ್ ಸೈಕ್ಲಿಂಗ್ ರೇಸ್ ರದ್ದು

Update: 2020-04-14 16:58 GMT

 ಪ್ಯಾರೀಸ್ , ಎ.14: ಕೋವಿಡ್ -19 ಕಾರಣದಿಂದಾಗಿ   ಟೂರ್ ಡೆ ಫ್ರಾನ್ಸ್ ಸೈಕ್ಲಿಂಗ್ ರೇಸ್  ರದ್ದುಗೊಂಡಿದೆ.

ಫ್ರಾನ್ಸ್ ನ  ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಸೋಮವಾರ ರಾಷ್ಟ್ರಕ್ಕೆ ನೀಡಿದ ಸಂದೇಶದಲ್ಲಿ ಜನಸಂದಣಿಯನ್ನು ಹೊಂದಿರುವ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ಜುಲೈ ಮಧ್ಯದವರೆಗೂ  ನಿಷೇಧಿಸಲಾಗಿದೆ ಎಂದು ಘೋಷಿಸಿದರು.

ಈ ಕಾರಣದಿಂದಾಗಿ ಟೂರ್ ಡೆ ಫ್ರಾನ್ಸ್ ಸೈಕ್ಲಿಂಗ್ ರೇಸ್ ನ್ನು  ಸಂಘಟಕರು ರದ್ದುಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ. ಜೂನ್ 27ರಂದು  ಇದು ಆರಂಭವಾಗಬೇಕಿತ್ತು.  ಮುಂದಿನ ದಿನಾಂಕವನ್ನು  ತಿಳಿಸಿಲ್ಲ.

1946 ರಲ್ಲಿ  ಎರಡನೆಯ ಮಹಾಯುದ್ಧದ ಕಾರಣದಿಂದಾಗಿ  ಟೂರ್ ಡೆ ಫ್ರಾನ್ಸ್ ಸೈಕ್ಲಿಂಗ್ ರೇಸ್  ನಡೆಸಲಾಗಲಿಲ್ಲ. ಆ ಬಳಿಕ ಇದೇ ಮೊದಲ ಬಾರಿ ರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News