ಮಹಾರಾಷ್ಟ್ರ: ಒಂದೇ ದಿನ 350 ಹೊಸ ಕೊರೋನ ಸೋಂಕು ಪ್ರಕರಣ, 18 ಸಾವು

Update: 2020-04-15 03:52 GMT

ಮುಂಬೈ: ಮಹಾರಾಷ್ಟ್ರದಲ್ಲಿ ಮಂಗಳವಾರ ಒಂದೇ ದಿನದಲ್ಲಿ 350 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,684ಕ್ಕೇರಿದೆ. ಅಂತೆಯೇ 18 ಮಂದಿ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದು, ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 178ಕ್ಕೆ ಹೆಚ್ಚಿದೆ.

ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ 1,756 ಪ್ರಕರಣಗಳು ದೃಢಪಟ್ಟಿದ್ದು, 112 ಮಂದಿ ಜೀವ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಇದುವರೆಗೆ 259 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಮುಂಬೈ ನಗರದಲ್ಲಿ ಮಂಗಳವಾರ 11 ಸಾವು ಸಂಭವಿಸಿದೆ. ಪುಣೆಯಲ್ಲಿ 4, ಅಹ್ಮದ್‍ನಗರ ಹಾಗೂ ಔರಂಗಾಬಾದ್‍ನಲ್ಲಿ ತಲಾ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮಧ್ಯೆ ಲಾಕ್‍ಡೌನ್ ವಿಸ್ತರಣೆ ವಿರೋಧಿಸಿ ಮುಂಬೈನ ಬಾಂದ್ರಾದಲ್ಲಿ ವಲಸೆ ಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು.

ಮೃತಪಟ್ಟ 18 ಮಂದಿಯ ಪೈಕಿ 13 ಮಂದಿ ಮಧುಮೇಹ, ಆಸ್ತಮಾ ಮತ್ತು ಹೃದ್ರೋಗದಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News