ಲಾಕ್ ಡೌನ್: ಕೃಷಿ, ಐಟಿ, ಇ-ಕಾಮರ್ಸ್, ಅಂತರಾಜ್ಯ ಸರಕು ಸಾಗಣೆಗೆ ಎ. 20ರ ನಂತರ ಅವಕಾಶ

Update: 2020-04-15 06:09 GMT

ಹೊಸದಿಲ್ಲಿ, ಎ.15:ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನ ವೈರಸ್  ಸೋಂಕು ತಡೆಗೆ ಮೇ 3ರ ತನಕ ಲಾಕ್ ಡೌನ್ ವಿಸ್ತರಿಸುವ ಘೋಷಣೆ ಮಾಡಿದ  ಒಂದು ದಿನದ ನಂತರ "ಕೃಷಿ, ಐಟಿ, ಇ-ಕಾಮರ್ಸ್ ಮತ್ತು ಎಲ್ಲಾ ಅಂತರರಾಜ್ಯ ಸರಕು ಸಾಗಣೆಗೆ ಎಪ್ರಿಲ್ 20 ರ ನಂತರ ಅವಕಾಶ ನೀಡಲಾಗುವುದು ಎಂದು  ಹೊಸ ಮಾರ್ಗಸೂಚಿಗಳಲ್ಲಿ ಸರಕಾರ ತಿಳಿಸಿದೆ. ವಿವರ ಇಂತಿವೆ.

1. ದಿನಕೂಲಿ ಕಾರ್ಮಿಕರಿಗೆ ಮತ್ತು ಇತರರಿಗೆ ಉದ್ಯೋಗ ಸೃಷ್ಟಿಸಲು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು ಸಂಪೂರ್ಣವಾಗಿ ಪುನರಾರಂಭಗೊಳ್ಳುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕೆಗಳಿಗೆ ಕಟ್ಟುನಿಟ್ಟಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾನದಂಡಗಳೊಂದಿಗೆ ಅವಕಾಶ ನೀಡಲಾಗುವುದು.

2. ಅಗತ್ಯ ವಸ್ತುಗಳ ಮತ್ತು ಅನಿವಾರ್ಯವಲ್ಲದ ಸರಕುಗಳ ಅಂತರ-ರಾಜ್ಯ ಸಾಗಣೆಗೆ ಅವಕಾಶ ನೀಡಲಾಗುವುದು. ಹೆದ್ದಾರಿ ‘ಡಾಬಾಸ್', ಟ್ರಕ್ ರಿಪೇರಿ ಅಂಗಡಿಗಳು ಮತ್ತು ಸರ್ಕಾರಿ ಚಟುವಟಿಕೆಗಳಿಗಾಗಿ ಕಾಲ್ ಸೆಂಟರ್ ಗಳು  ಮತ್ತು  ಔಷಧಿ ಹಾಗೂ  ವೈದ್ಯಕೀಯ ಉಪಕರಣಗಳ ಉತ್ಪಾದನಾ ಘಟಕಗಳನ್ನು ಎಪ್ರಿಲ್ 20ರ ಬಳಿಕ ತೆರೆಯಬಹುದು.

3."ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಲು, ಆಹಾರ ಸಂಸ್ಕರಣಾ ಕೈಗಾರಿಕೆಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕೆಗಳು; ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು, ನೀರಾವರಿ ಯೋಜನೆಗಳು, ಕಟ್ಟಡಗಳು ಮತ್ತು ಕೈಗಾರಿಕಾ ಯೋಜನೆಗಳ ನಿರ್ಮಾಣ; ನೀರಾವರಿ ಮತ್ತು ನೀರಿನ ಸಂರಕ್ಷಣಾ ಕಾರ್ಯಗಳಿಗೆ ಆದ್ಯತೆಯೊಂದಿಗೆ ಎಂಎನ್‌ಆರ್‌ಇಜಿಎ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಗ್ರಾಮೀಣ ಸಾಮಾನ್ಯ ಸೇವಾ ಕೇಂದ್ರಗಳ ಕಾರ್ಯಾಚರಣೆಯನ್ನು ಅನುಮತಿ ನೀಡಲಾಗಿದೆ. ಈ ಚಟುವಟಿಕೆಗಳು ವಲಸೆ ಕಾರ್ಮಿಕರಿಗೆ ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ" ಎಂದು ಮಾರ್ಗಸೂಚಿಗಳು ಹೇಳುತ್ತವೆ.

4. ಸಾಮಾಜಿಕ  ಅಂತರ ಕಾಯ್ದುಕೊಳ್ಳಲು ಎಸ್‌ಒಪಿ ಅನುಷ್ಠಾನಗೊಳಿಸಿದ ನಂತರ ಪ್ರವೇಶ ನಿಯಂತ್ರಣದೊಂದಿಗೆ ಉತ್ಪಾದನೆ ಮತ್ತು ಇತರ ಕೈಗಾರಿಕಾ ಸಂಸ್ಥೆಗಳನ್ನು ಎಸ್‌ಇ ಝಡ್‌ಗಳು, ಇಒಯುಗಳು, ಕೈಗಾರಿಕಾ ಎಸ್ಟೇಟ್ ಗಳು  ಮತ್ತು ಕೈಗಾರಿಕಾ ಟೌನ್‌ಶಿಪ್‌ಗಳ  ಕಾರ್ಯಾಚರಣೆಗೆ ಅನುಮತಿಸಲಾಗುವುದು. ಐಟಿ ಯಂತ್ರಾಂಶ ಮತ್ತು ಅಗತ್ಯ ವಸ್ತುಗಳ ತಯಾರಿಕೆ ಮತ್ತು ಪ್ಯಾಕೇಜಿಂಗ್ ಪುನರಾರಂಭಗೊಳ್ಳಲು ಅವಕಾಶ ಇದೆ.

5. ಕಲ್ಲಿದ್ದಲು, ಖನಿಜ ಮತ್ತು ತೈಲ ಉತ್ಪಾದನೆಗೆ ಅವಕಾಶ ನೀಡಲಾಗುವುದು.

6. ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕುಗಳು, ಎಟಿಎಂಗಳು, ಬಂಡವಾಳ ಮತ್ತು ಸಾಲ ಮಾರುಕಟ್ಟೆಗಳು ಸಹ ಕಾರ್ಯನಿರ್ವಹಿಸುತ್ತವೆ.

7. ಹಾಲು, ಹಾಲಿನ ಉತ್ಪನ್ನಗಳು, ಕೋಳಿ ಮತ್ತು ಜಾನುವಾರು ಸಾಕಣೆ ಮತ್ತು ಚಹಾ, ಕಾಫಿ ಮತ್ತು ರಬ್ಬರ್ ತೋಟಗಳ ಕೆಲಸ ಪುನರಾರಂಭಗೊಳ್ಳಲಿದೆ.

8. ಡಿಜಿಟಲ್ ಆರ್ಥಿಕತೆಯು ಸೇವಾ ವಲಯ ಮತ್ತು ರಾಷ್ಟ್ರೀಯ ಬೆಳವಣಿಗೆಗೆ ನಿರ್ಣಾಯಕವಾಗಿದೆ ಎಂದು ಸರ್ಕಾರ ಹೇಳಿದೆ, ಆದ್ದರಿಂದ ಇ-ಕಾಮರ್ಸ್, ಐಟಿ ಮತ್ತು ಐಟಿ-ಶಕ್ತಗೊಂಡ ಸೇವೆಗಳು, ಸರ್ಕಾರಿ ಚಟುವಟಿಕೆಗಳಿಗೆ ಡೇಟಾ ಮತ್ತು ಕಾಲ್ ಸೆಂಟರ್, ಮತ್ತು ಆನ್‌ಲೈನ್ ಬೋಧನೆ ಮತ್ತು ದೂರಶಿಕ್ಷಣ ಎಲ್ಲವೂ ಅನುಮತಿಸಲಾದ ಚಟುವಟಿಕೆಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News