ಭಾರತಕ್ಕೆ 6,50,000 ವೈದ್ಯಕೀಯ ಕಿಟ್‌ಗಳನ್ನು ರವಾನಿಸಿದ ಚೀನಾ
ಬೀಜಿಂಗ್,ಎ.16: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ನೆರವಾಗಲು ಚೀನಾ ಗುರುವಾರ 6,50,000 ಕೊರೋನ ವೈರಸ್ ವೈದ್ಯಕೀಯ ಕಿಟ್‌ಗಳನ್ನು ಭಾರತಕ್ಕೆ ರವಾನಿಸಿದೆ ಎಂದು ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರಿ ವಿಕ್ರಂ ಮಿಸ್ರಿ ತಿಳಿಸಿದ್ದಾರೆ.
ಚೀನಾದಿಂದ ಸಂಗ್ರಹಿಸಲಾಗುತ್ತಿರುವ ಎರಡು ಮಿಲಿಯನ್‌ಗೂ ಅಧಿಕ ಟೆಸ್ಟ್ ಕಿಟ್ಸ್ ಗಳನ್ನು ಮುಂದಿನ 15 ದಿನಗಳಲ್ಲಿ ಭಾರತಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ವಿಕ್ರಂ ಪಿಟಿಐಗೆ ತಿಳಿಸಿದ್ದಾರೆ.
ಆರ್‌ಎನ್‌ಎ ಹೊರತೆಗೆಯುವ ಕಿಟ್‌ಗಳನ್ನು ಇಂದು ಗ್ವಾಂಗ್‌ಝೌ ಏರ್‌ಪೋರ್ಟ್‌ನಿಂದ ಭಾರತಕ್ಕೆ ಕಳುಹಿಸಿಕೊಡಲಾಗಿದೆ ಎಂದು ಮಿಸ್ರಿಗುರುವಾರ ಟ್ವೀಟ್ ಮಾಡಿದ್ದಾರೆ.
ಕೊರೋನ ವಿರುದ್ಧ ಸ್ವತಃ ಹೋರಾಟ ನಡೆಸಿದ್ದ ಚೀನಾ ಎರಡು ತಿಂಗಳ ಬಳಿಕ ತನ್ನ ಕೈಗಾರಿಕೆಗಳಲ್ಲಿ ಉತ್ಪಾದನೆಗಳನ್ನು ಆರಂಭಿಸಿದೆ. ಭಾರತ ಸಹಿತ ವಿಶ್ವದೆಲ್ಲೆಡೆ ಅಗತ್ಯವಿರುವ ವೈದ್ಯಕೀಯ ಸರಕುಗಳು,ಅತ್ಯಂತ ಮುಖ್ಯವಾಗಿ ವೆಂಟಿಲೇಟರ್‌ಗಳು ಹಾಗೂ ವೈಯಕ್ತಿಕ ಸುರಕ್ಷಾ ಸಲಕರಣೆ(ಪಿಪಿಇ)ರಫ್ತು ಮಾಡುವ ಅಪಾರ ವ್ಯವಹಾರ ಅವಕಾಶವನ್ನು ಬಳಸಿಕೊಳ್ಳಲು ಚೀನಾ ವ್ಯಸ್ತವಾಗಿದೆ.