×
Ad

ಕೊರೋನ ಸೋಂಕಿತ ಕಳ್ಳನನ್ನು ಸೆರೆ ಹಿಡಿದ ಪೊಲೀಸ್ ಪೇದೆಗೂ ತಟ್ಟಿದ ಸೋಂಕು

Update: 2020-04-16 19:34 IST
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್: ಗುಜರಾತ್ ರಾಜ್ಯದ ವಡೋದರ ಜಿಲ್ಲೆಯ ದಭೋಯಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಡ್ ಕಾನ್‍ಸ್ಟೇಬಲ್ ಒಬ್ಬರು ಕೊರೋನ ಪಾಸಿಟಿವ್ ಆಗಿದ್ದಾರೆ. ಮಂಗಳವಾರಷ್ಟೇ ಇವರು ಸೆರೆ ಹಿಡಿದ ಕಳ್ಳತನ ಆರೋಪಿಯೊಬ್ಬ ಕೊರೋನ ಪಾಸಿಟಿವ್ ಆಗಿದ್ದೇ ಪೊಲೀಸ್ ಸಿಬ್ಬಂದಿಗೂ ಸೋಂಕು ತಗಲಲು ಕಾರಣ.

ಐವತ್ತೆರಡು ವರ್ಷದ ಕಳ್ಳತನ ಆರೋಪಿ, ತನ್ನ ಒಬ್ಬ ಸಹಚರನೊಂದಿಗೆ ದಭೋಯಿ ತಾಲೂಕಿನ ಟಿಂಬಿ ಗ್ರಾಮದ ರೈಲ್ವೆ ಕ್ರಾಸಿಂಗ್ ಸಮೀಪದ ದಿನಸಿ ಅಂಗಡಿಯಿಂದ ರೂ 4,265 ಮೌಲ್ಯದ ಪಾನ್ ಮಸಾಲದೊಂದಿಗೆ ಪರಾರಿಯಾಗಿದ್ದ. ಈ ಕುರಿತು ಅಂಗಡಿ ಮಾಲಕ ಸೋಮವಾರ ದೂರು ನೀಡಿದ್ದು ಮಂಗಳವಾರ ಪೊಲೀಸರು ಆರೋಪಿಗಳಿಬ್ಬರನ್ನು ವಶಪಡಿಸಿಕೊಂಡಿದ್ದರು. ಕೂಡಲೇ ಇಬ್ಬರಿಗೂ ಕೊರೋನ ಪರೀಕ್ಷೆ ನಡೆಸಲಾಗಿತ್ತು ಹಾಗೂ ಅವರಲ್ಲೊಬ್ಬನ ವರದಿ ಪಾಸಿಟಿವ್ ಆಗಿದ್ದರೆ ಇನ್ನೊಬ್ಬನ ವರದಿ ನೆಗೆಟಿವ್ ಆಗಿತ್ತು.

ಕೂಡಲೇ ಆರೋಪಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿಯನ್ನೂ ಪರೀಕ್ಷೆಗೊಳಪಡಿಸಲಾಗಿದ್ದು ಅವರಲ್ಲೊಬ್ಬರು ಕೊರೋನ ಪಾಸಿಟಿವ್ ಆಗಿದ್ದಾರೆ. ಉಳಿದ ನಾಲ್ವರನ್ನು ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿರಲು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News