ಪಿಂಚಣಿ ಕಡಿತಗೊಳಿಸುವ ಪ್ರಸ್ತಾವ ಇಲ್ಲ:ಕೇಂದ್ರ ಸರಕಾರ
Update: 2020-04-19 15:15 IST
ಹೊಸದಿಲ್ಲಿ,ಎ.19: ಪಿಂಚಣಿ ಕಡಿತಗೊಳಿಸುವುದಿಲ್ಲ.ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿಲ್ಲ್ಲ ಎಂದು ಕೇಂದ್ರ ಸರಕಾರ ರವಿವಾರ ಸ್ಪಷ್ಟಪಡಿಸಿದೆ.
ಪಿಂಚಣಿ ನಿಲ್ಲಿಸುವ ಅಥವಾ ಕಡಿತಗೊಳಿಸುವ ಕುರಿತಂತೆ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ ಎಂಬ ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ.
ವದಂತಿ ವಿಚಾರ ಪಿಂಚಣಿ ಹಾಗೂ ಪಿಂಚಣಿದಾರರ ಇಲಾಖೆಯ ಗಮನಕ್ಕೆ ಬಂದಿದೆ.ಪ್ರಸ್ತುತ ಕೋವಿಡ್-19 ವೈರಸ್ ಹಾಗೂ ಆರ್ಥಿಕ ಸನ್ನಿವೇಶದಲ್ಲಿ ಇಂತಹ ಅನೇಕ ವದಂತಿಗಳು ಹರಡುತ್ತಿವೆ.ಪಿಂಚಣಿ ಕಡಿತ ಅಥವಾ ಸ್ಥಗಿತಗೊಳಿಸಲು ಸರಕಾರ ಚಿಂತಿಸುತ್ತದೆ ಎಂಬ ವದಂತಿಯು ಪಿಂಚಣಿದಾರರ ಚಿಂತೆಗೆ, ಆತಂಕಕ್ಕೆ ಮೂಲವಾಗಿದೆ ಸರಕಾರ ಪಿಂಚಣಿದಾರರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಸರಕಾರ ತಿಳಿಸಿದೆ.
ಕೇಂದ್ರಸರಕಾರದ 62.26 ಲಕ್ಷ ಪಿಂಚಣಿದಾರರಿದ್ದಾರೆ.