ಶಸ್ತ್ರಚಿಕಿತ್ಸೆ ನಂತರ ಕಿಮ್ ಜಾಂಗ್ ಉನ್ ಜೀವ ಅಪಾಯದಲ್ಲಿ: ವರದಿ

Update: 2020-04-21 08:00 GMT

ಹೊಸದಿಲ್ಲಿ: ಹೃದಯ ಶಸ್ತ್ರಚಿಕಿತ್ಸೆಗೊಳಗಾದ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅಪಾಯದಲ್ಲಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ವರದಿಗಳನ್ನು ಉತ್ತರ ಕೊರಿಯಾ ನಿರಾಕರಿಸಿದೆ.

ಗಂಭೀರ ಅಪಾಯದಲ್ಲಿರುವ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿಯ ಬಗ್ಗೆ ಅಮೆರಿಕದ ಗುಪ್ತಚರ ಏಜೆನ್ಸಿಗಳು ಮಾಹಿತಿ ಕಲೆ ಹಾಕುತ್ತಿವೆ ಎಂದು ಸಿಎನ್ಎನ್ ವರದಿ ಮಾಡಿದೆ.

ತನ್ನ ಅಜ್ಜ ಕಿಮ್ ಸಂಗ್ ಅವರ ಹುಟ್ಟುಹಬ್ಬ ಆಚರಣೆಗೆ ಕಿಮ್ ಜಾಂಗ್ ಗೈರಾದದ್ದು ಈ ಸುದ್ದಿಗೆ ಪುಷ್ಠಿ ನೀಡಿದೆ. ಆದರೆ ಈ ಎಲ್ಲಾ ವರದಿಗಳನ್ನು ಉತ್ತರ ಕೊರಿಯಾ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News