×
Ad

ಮಧ್ಯಪ್ರದೇಶ : ಐವರು ನೂತನ ಸಚಿವರು ಪ್ರಮಾಣ

Update: 2020-04-21 14:38 IST

ಭೋಪಾಲ್ , ಎ.21: ಮೂವರು  ಹಾಲಿ ಮತ್ತು  ಇಬ್ಬರು ಮಾಜಿ ಶಾಸಕರು ಸೇರಿದಂತೆ ಐದು ಮಂದಿ ಮಧ್ಯಪ್ರದೇಶದ ನೂತನ ಸಚಿವರು  ಮಂಗಳವಾರ ಪ್ರಮಾಚನ ಸ್ವೀಕರಿಸಿದರು.

 ಕೋವಿಡ್ -19  ಲಾಕ್‌ಡೌನ್ ಮಧ್ಯೆ ರಾಜ್ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಐವರು ನೂತನ ಸಚಿವರುಗಳಿಗೆ   ಗವರ್ನರ್ ಲಾಲ್ ಜಿ ಟಂಡನ್ ಅವರು ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕೋವಿಡ್ -19 ರ ಕಾರಣದಿಂದಾಗಿ ರಾಜ್ಯವು ಒಂದು ತಿಂಗಳಿನಿಂದ ಕ್ಯಾಬಿನೆಟ್ ಇಲ್ಲದೆ ಇತ್ತು .ಮಾರ್ಚ್ 23 ರಂದು ಚೌಹಾಣ್ ಸಿಎಂ ಆಗಿ  ಪ್ರಮಾಣವಚನ ಸ್ವೀಕರಿಸಿದ್ದರು. ಇಬ್ಬರು ಮಾಜಿ ಶಾಸಕರಾದ ತುಳಸಿ ಸಿಲಾವತ್ ಮತ್ತು ಗೋವಿಂದ್ ಸಿಂಗ್ ರಜಪೂತ್  ಸಚಿವ ಸಂಪುಟ ಪ್ರವೇಶಿಸಿದ್ದಾರೆ. ಬಿಜೆಪಿಯ ಮಾಜಿ ಸಚಿವರಾದ ನರೋತ್ತಮ್ ಮಿಶ್ರಾ, ಮೀನಾ ಸಿಂಗ್ ಮತ್ತು ಕಮಲ್ ಪಟೇಲ್ ಸಚಿವ ಸಂಪುಟ ಸೇರ್ಪಡೆಗೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News