×
Ad

“ಕೇರಳ ಹೆಚ್ಚು ಸುರಕ್ಷಿತ”: ಕೊರೋನದಿಂದ ಗುಣಮುಖರಾದ ಇಟಲಿ ಪ್ರಜೆಯ ಮಾತು

Update: 2020-04-21 14:43 IST

ತಿರುವನಂತಪುರಂ: “ಕೇರಳ ಈಸ್ ಮೋರ್ ಸೇಫ್” (ಕೇರಳ ಹೆಚ್ಚು ಸುರಕ್ಷಿತವಾಗಿದೆ)….. ಇದು ಕೋವಿಡ್-19 ಸೋಂಕಿಗೊಳಗಾಗಿ ಎರ್ಣಾಕುಳಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಕೊನೆಗೆ ಇಲ್ಲಿನ ಜನರಲ್ ಆಸ್ಪತ್ರೆಯಲ್ಲಿ 14 ದಿನಗಳ ಕ್ವಾರಂಟೈನ್ ಅವಧಿಯನ್ನೂ ಪೂರೈಸಿ ಸೋಮವಾರ ಬಿಡುಗಡೆಗೊಂಡ ಇಟಲಿಯ ನಾಗರಿಕ ರಾಬರ್ಟೊ ಟೊನಿಜ್ಝೋ ಉದ್ಗರಿಸಿದ ಮಾತುಗಳು.

ಹತ್ತಿರದ ವರ್ಕಳಕ್ಕೆ ಭೇಟಿ ನೀಡಿದ್ದ ಸಂದರ್ಭ ನಲ್ವತ್ತರ ಅಸುಪಾಸಿನ ವಯಸ್ಸಿನ ರಾಬರ್ಟೊ ಅವರು ಕೊರೋನ ಪಾಸಿಟಿವ್ ಆಗಿರುವುದು ಪರೀಕ್ಷೆ ವೇಳೆ ತಿಳಿದು ಬಂದಿತ್ತು. ನಂತರ  ಚಿಕಿತ್ಸೆ ಪಡೆದ ಅವರು ಗುಣಮುಖರಾಗಿದ್ದರು. ಮಾರ್ಚ್ 13ರ ಅವರ ವೈದ್ಯಕೀಯ ವರದಿ ನೆಗೆಟಿವ್ ಆಗಿತ್ತು. ನಂತರ ಅವರು ಕ್ವಾರಂಟೈನಿನಲ್ಲಿದ್ದರು.

“ನಾನು ತುಂಬಾ ಖುಷಿಯಾಗಿದ್ದೇನೆ. ನಾನು ಎಲ್ಲರಿಗೂ, ಎಲ್ಲಾ ವೈದ್ಯರಿಗೂ ಹಾಗೂ ಇತರ ಸಿಬ್ಬಂದಿಗೂ ಧನ್ಯವಾದ ಹೇಳಬಯಸುತ್ತೇನೆ. ಎಲ್ಲವೂ ಸರಿಯಾದ ಮೇಲೆ ಮತ್ತೆ ಇಲ್ಲಿಗೆ ವಾಪಸ್ ಬರುತ್ತೇನೆ. ಕೇರಳ ನನಗೆ ಮನೆಯಿದ್ದಂತೆ. ಇಲ್ಲಿ ಹೆಚ್ಚು ಸುರಕ್ಷಿತವಾಗಿದೆ. ಈಗ ನಾನು ನನ್ನ ದೇಶಕ್ಕೆ ಹೋಗಬೇಕು, ಆದರೆ ಮತ್ತೆ ವಾಪಸ್ ಬರುತ್ತೇನೆ'' ಎಂದು ಮಾಧ್ಯಮಗಳ ಜತೆ ಮಾತನಾಡಿದ ಅವರು ಹೇಳಿದರು.

ಬೆಂಗಳೂರಿಗೆ ತೆರಳಲು ರಾಜ್ಯ ಸರಕಾರ ವಾಹನದ ಏರ್ಪಾಟು ಅವರಿಗಾಗಿ ಮಾಡಿದ್ದು, ಅಲ್ಲಿಂದ ಮುಂದೆ ಅವರು ಇತರ ಇಟಲಿ ನಾಗರಿಕರೊಂದಿಗೆ ತಮ್ಮ ದೇಶಕ್ಕೆ ಹಿಂದಿರುಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News