ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಗೆ ಮನವಿ

Update: 2020-04-24 09:25 GMT

ರಿಯಾದ್ : ಕೋವಿಡ್-19 ರಿಲೀಫ್ ಸಮಿತಿ ಪಶ್ಚಿಮ ಘಟಕ ಸೌದಿ ಅರೇಬಿಯಾ ಇದರ ಸಂಯೋಜಕರಾದ ಇಬ್ರಾಹೀಂ ಕನ್ನಂಗಾರ್ ರವರ ನೇತೃತ್ವದಲ್ಲಿ ಅನಿವಾಸಿ ಕನ್ನಡಿಗರ ಸಮಸ್ಯೆಯನ್ನು ಝೂಮ್ ಖಾತೆಯ ಮುಖಾಂತರ ನೇರ ಸಂವಾದದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್‌ ಹಾವೇರಿ ಅವರ ಗಮನಕ್ಕೆ ತರಲಾಯಿತು. 

ಈ ಕಾರ್ಯಕ್ರಮದಲ್ಲಿ ಮಕ್ಕಾ, ಮದೀನಾ, ಜಿದ್ದಾ, ತ್ವಾಯಿಫ್, ಯಾಂಬೋ, ಹೈಲ್, ತಬೂಕ್, ನಝ್ರಾನ್ , ಅಲ್ ಜೌಫ್ , ಅಲ್ ಅಬ್ಹಾಹ ಹೀಗೆ ಸುಮಾರು 10 ಯೂನಿಟಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಕೋವಿಡ್-19 ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಲಾಗಿದ್ದು ವಿವಿಧ ಯೂನಿಟ್ ಗಳ ಮೂರು ಪ್ರತಿನಿಧಿಗಳನ್ನು ನೇಮಕ ಮಾಡಿ ಅವರು ತಮ್ಮ ತಮ್ಮ ಯುನಿಟ್ ಗಳ ಪ್ರತಿಯೊಬ್ಬ ಕನ್ನಡಿಗರ ಮಾಹಿತಿ ಕಲೆ ಹಾಕಲು ಮತ್ತು ಅವರ ಸದ್ಯದ ಪರಿಸ್ಥಿತಿಯನ್ನು ಕೋವಿಡ್-19 ಟಾಸ್ಕ್ ಫೋರ್ಸ್ ಸಮಿತಿಗೆ ತಿಳಿಸಲು ಸೂಚಿಸಿದರು.

ಅದೇ ರೀತಿ ತಮ್ಮ ತಮ್ಮ ಯೂನಿಟ್ ಗಳಲ್ಲಿ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸಲೀಂ ಅಹ್ಮದ್ ಅವರಿಗೆ ವಿವರಿಸಲಾಯಿತು, ಕೆಲವರು  ಕುಟುಂಬ ಸದಸ್ಯರನ್ನು ಸೌದಿ ಅರೇಬಿಯಾಕ್ಕೆ ವಿಸಿಟ್ ವೀಸಾ ಮೂಲಕ ಕರೆದುಕೊಂಡು ಬಂದಿದ್ದರು, ಆದರೆ ಈಗ ವೀಸಾ ಅವಧಿ ಮುಗಿದು ಮುಂದಿನ ದಾರಿ ಕಾಣದೇ ಕಂಗಾಲಾಗಿದ್ದಾರೆ, ಕೆಲವು ಕಾರ್ಮಿಕರಿಗೆ ತಮ್ಮ ಸಂಸ್ಥೆಯು ಸಂಬಳ ರಹಿತ ರಜೆ ಘೋಷಿಸಿದೆ ಅವರೆಲ್ಲ ಅತ್ತ ಊರಿಗೂ ಹೋಗಲಾಗದೇ ಇಲ್ಲೂ ಇರಲಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಹಲವಾರು ಸಮಸ್ಯೆಗಳು ಇವೆ, ಅವರೆಲ್ಲರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಿ ವಿಶೇಷ ವಿಮಾನದ ಮೂಲಕ ಊರಿಗೆ ಮರಳಿ ಕರೆ ತರುವ ಪ್ರಯತ್ನ ಮಾಡಬೇಕು ಎಂದು ಅವರಲ್ಲಿ ವಿನಂತಿಸಿದರು.

ಅನಿವಾಸಿ ಭಾರತೀಯರ ಏನೇ ಸಮಸ್ಯೆ ಇದ್ದರೂ ಅದನ್ನು ಕೇಂದ್ರ ಮತ್ತು ರಾಜ್ಯ ಸರಕಾರದ ಗಮನಕ್ಕೆ ತರಲಾಗುವುದು ಎಂಬ ಭರವಸೆಯನ್ನು ಅವರು ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ಸಂವಾದ ನಡೆಸಿ ಪ್ರತಿಯೊಂದು ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿದರು. ಜಾವಿದ್ ಕಲ್ಲಡ್ಕ ಸಂವಾದ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ನಿಝಾಮ್ ಬಿ.ಎಸ್ ಸುರಲ್ಪಾಡಿ

contributor

Editor - ನಿಝಾಮ್ ಬಿ.ಎಸ್ ಸುರಲ್ಪಾಡಿ

contributor

Similar News