ಸೌದಿಯಲ್ಲಿ ನಿಧನರಾದ ಕನ್ನಡಿಗನ ಅಂತ್ಯಕ್ರಿಯೆಗೆ ಇಂಡಿಯನ್ ಸೋಷಿಯಲ್ ಫೋರಂ ನೆರವು

Update: 2020-04-24 11:26 GMT

ರಿಯಾದ್ :  ಸೌದಿಯ ಅಸೀರ್ ಪ್ರಾಂತ್ಯದ ಅಭಾ ಎಂಬಲ್ಲಿ ದುಡಿಯುತ್ತಿದ್ದ  ಕರ್ನಾಟಕದ ತುಮಕೂರಿನ ಅಮ್ಜದ್ ಖಾನ್ ಎಂಬವರು ಹೃದಯಾಘಾತದಿಂದ ಮೃತರಾಗಿದ್ದು, ಮೃತರ ಕುಟುಂಬದ ಅನುಮತಿ ಪ್ರಕಾರ ಅಲ್ಲಿಯೇ ದಫನ ನಡೆಸುವುದಾಗಿ ತೀರ್ಮಾನಿಸಲಾಗಿತ್ತು.

ಮೃತದೇಹದ ಪೋಲಿಸ್ ತನಿಖೆ ಹಾಗೂ ದಫನ ಕಾರ್ಯ, ಭಾರತೀಯ ರಾಯಬಾರಿ ಕಚೇರಿ ಹಾಗೂ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಕಚೇರಿ ಕೆಲಸಗಳಲ್ಲಿ ಸಂಪೂರ್ಣವಾಗಿ ಹನೀಫ್ ಮಂಜೇಶ್ವರ, ಅಧ್ಯಕ್ಷರು ಇಂಡಿಯನ್ ಸೋಷಿಯಲ್ ಫೋರಂ ಅಭಾ ಕರ್ನಾಟಕ ಘಟಕ ಮತ್ತು ತಂಡ ಶ್ರಮಿಸಿದರು.

ದಫನ ಪ್ರಕ್ರಿಯೆಯಲ್ಲಿ ಕೋಯಾ ಕೇರಳ, ಇಂಡಿಯನ್ ಸೋಶಿಯಲ್ ಫೋರಂ ಅಭಾ ರೀಝನಲ್ ಕೇಂದ್ರೀಯ ಅಧ್ಯಕ್ಷರು, ಇಂಡಿಯಾ ಫೆಟರ್ನಿಟಿ ಫೋರಂ  ಇದರ ಜಿಝಾನ್ ಕರ್ನಾಟಕ ಚಾಪ್ಟರ್ ಕಾರ್ಯದರ್ಶಿಗಳಾದ  ಹನೀಫ್ ಜೋಕಟ್ಟೆ ಹಾಗ ಇಂಡಿಯನ್ ಸೋಷಿಯಲ್ ಫೋರಂ ಇದರ ಕಾರ್ಯಕರ್ತರು ಉಪಸ್ಥಿತರಿದ್ದರು.

ಕೋವಿಡ್ 19 ಕಾರಣ ಸೌದಿ ಅರೇಬಿಯಾದಲ್ಲಿ 24 ಗಂಟೆಗಳ ಕಠಿಣ ಲಾಕ್ಡೌನ್ ಇರುವ ಮಧ್ಯೆಯೂ ಇಲ್ಲಿನ ಕಾನೂನಿನ ಪ್ರಕಾರ ಎಲ್ಲಾ ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ಮೃತದೇಹದ ಅಂತ್ಯಕ್ರಿಯೆ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹನೀಫ್ ಮಂಜೇಶ್ವ ಅವರ  ಕಾರ್ಯ ವೈಖರಿಗೆ ಇಂಡಿಯನ್ ಕಾನ್ಸುಲೇಟ್ ಅಧಿಕಾರಿಗಳು ಹಾಗೂ ಅಭಾ, ಕಮೀಶ್ ವ್ಯಾಪ್ತಿಯ ಅನಿವಾಸಿ ಭಾರತೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಮೃತ ಅಮ್ಜದ್ ತುಮಕೂರು ಇವರ ಪತ್ನಿ ಹಾಗೂ ಕುಟುಂಬಸ್ಥರು ಹಾಗೂ ತುಮಕೂರಿನ ಜನತೆ ಹನೀಫ್ ಮಂಜೇಶ್ವರ ಹಾಗೂ ಇಂಡಿಯನ್ ಸೋಶಿಯಲ್ ಫೋರಂ ಕಾರ್ಯವೈಖರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News