×
Ad

ಈ ದೇಶದಲ್ಲಿನ್ನು ಡ್ರೋನ್ ಮೂಲಕ ಕೊರೋನ ಔಷಧಿ ವಿತರಣೆ

Update: 2020-04-25 09:22 IST

ಲಂಡನ್, ಎ.25: ಬ್ರಿಟನ್‌ನಲ್ಲಿ ಕೊರೋನ ವೈರಸ್‌ಗೆ ಬಲಿಯಾದವರ ಸಂಖ್ಯೆ 20 ಸಾವಿರದ ಸನಿಹ ಇದ್ದು, ದೇಶದ ದ್ವೀಪಗಳು ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ಕೊರೋನ ಔಷಧಿಯನ್ನು ಡ್ರೋನ್ ಗಳ ಮೂಲಕ ವಿತರಿಸುವ ಪ್ರಯೋಗಕ್ಕೆ ಬೋರಿಸ್ ಜಾನ್ ಸರ್ಕಾರ ಶುಕ್ರವಾರ ಒಪ್ಪಿಗೆ ನೀಡಿದೆ.

ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 1,43,464 ಕೊರೋನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 19,506 ಮಂದಿ ಮೃತಪಟ್ಟಿದ್ದಾರೆ. ಇಷ್ಟೂ ಸಂಖ್ಯೆಯ ರೋಗಿಗಳು ಆಸ್ಪತ್ರೆಯಲ್ಲಿ ಮೃತಪಟ್ಟವರು. ಖಾಸಗಿ ಮನೆ, ಆರೈಕೆ ಗೃಹ ಹಾಗೂ ಹಾಸ್ಪಿಸ್‌ಗಳಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಇದು ಒಳಗೊಂಡಿಲ್ಲ. ಆದ್ದರಿಂದ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 20 ಸಾವಿರವನ್ನು ದಾಟಿರಬಹುದು ಎಂದು ಅಂದಾಜಿಸಲಾಗಿದೆ.

ಆರಂಭಿಕ ಹಂತದಲ್ಲಿ ಉಂಟಾದ ದೋಷಗಳಿಂದಾಗಿ ಈ ಪರಿಸ್ಥಿತಿ ಉದ್ಭವಿಸಿದೆ ಎಂಬ ಆರೋಪಗಳ ನಡುವೆಯೇ, ಆರೋಗ್ಯ ಇಲಾಖೆ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಈ ಮಧ್ಯೆ ಔಷಧಿಗಳ ವಿತರಣೆಗೆ ಡ್ರೋನ್ ನೆರವು ಪಡೆಯುವ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಂಚಾರ ಕಾರ್ಯದರ್ಶಿ ಗ್ರಾಂಟ್ ಶಪ್ಸ್ ಹೇಳಿಕೆ ನೀಡಿದ್ದಾರೆ.

ಡ್ರೋನ್ ಮೂಲಕ ಔಷಧಿ ವಿತರಿಸುವ ಪ್ರಯೋಗಕ್ಕೆ ಹಸಿರು ನಿಶಾನೆ ನೀಡಲಾಗಿದೆ. ಈ ವರ್ಷದ ಆರಂಭದಲ್ಲಿ, ಭವಿಷ್ಯದ ಸಂಚಾರ ವಲಯವನ್ನು ಅಭಿವೃದ್ಧಿಪಡಿಸಲು ಸೌತ್‌ಹ್ಯಾಂಪ್ಟನ್ ಮತ್ತು ಪೋರ್ಟ್‌ಮೌತ್‌ಗೆ 28 ದಶಲಕ್ಷ ಪೌಂಡ್ ನೀಡಿದ್ದೇವೆ ಎಂದು ವಿವರಿಸಿದರು.

 ಈ ವಿನೂತನ ಯೋಜನೆಗಾಗಿ 80 ಲಕ್ಷ ಪೌಂಡ್ ಮೊತ್ತವನ್ನು ಡ್ರೋನ್ ಪರೀಕ್ಷೆಗಾಗಿ ಮತ್ತು ಔಷಧ ವಿತರಿಸಲು ಹೇಗೆ ಇದನ್ನು ಮುಂದಿನ ದಶಕದಲ್ಲಿ ಸರಕು ಸಾಗಣೆಗೆ ಹೇಗೆ ಬಳಸಬಹುದು ಎಂಬ ಅಧ್ಯಯನ ನಡೆಸಲು ನಿಗದಿಪಡಿಸಲಾಗಿದೆ. ಇದೀಗ ಕೋವಿಡ್-19 ತುರ್ತು ಸಂದರ್ಭದಲ್ಲಿ ಈ ಔಷಧಿ ವಿತರಿಸುವ ಪ್ರಯೋಗ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News