×
Ad

ತೆರಿಗೆ ಹೆಚ್ಚಳ ಸಲಹೆ ಬಗ್ಗೆ ವಿವಾದ : ಸರ್ಕಾರ ಹೇಳುತ್ತಿರುವುದೇನು ?

Update: 2020-04-27 09:49 IST

ಹೊಸದಿಲ್ಲಿ : ದೇಶದಲ್ಲಿ ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಸಂಪನ್ಮೂಲ ಕ್ರೋಢೀಕರಿಸುವ ದೃಷ್ಟಿಯಿಂದ ಸರ್ಕಾರದ ಆದಾಯ ಹೆಚ್ಚಿಸಬೇಕು ಎಂದು ಭಾರತೀಯ ಕಂದಾಯ ಸೇವೆಗಳ ಕೆಲ ಅಧಿಕಾರಿಗಳು ಮುಂದಿಟ್ಟಿರುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಇದು ಅಶಿಸ್ತಿನ ಕ್ರಮ ಎಂದು ಬಣ್ಣಿಸಿದೆ. 

ಇಂಥ ಯಾವ ವರದಿಯನ್ನೂ ಸರ್ಕಾರ ಕೇಳಿಲ್ಲ ಅಥವಾ ಇದನ್ನು ಸಿದ್ಧಪಡಿಸುವುದು ಐಆರ್‌ಎಸ್ ಅಸೋಸಿಯೇಶನ್‌ನ ಕೆಲಸವೂ ಅಲ್ಲ. ಸಂಘದ ನಡೆ ದುರ್ನಡತೆ ಹಾಗೂ ಅಶಿಸ್ತಿನ ಕ್ರಮ ಎಂದು ಹೇಳಿದೆ.

ಸಿಬಿಡಿಟಿ ಅಧ್ಯಕ್ಷರಿಗೆ ಈ ವರದಿ ಸಲ್ಲಿಸಲಾಗಿದ್ದು, ಈ ಬಗ್ಗೆ ಸಂಘದ ಪದಾಧಿಕಾರಿಗಳಿಂದ ವಿವರಣೆ ಪಡೆಯುವಂತೆ ಅವರಿಗೆ ಸೂಚಿಸಲಾಗಿದೆ.
ಫಿಸ್ಕಲ್ ಆಪ್ಷನ್ಸ್ ಆ್ಯಂಡ್ ರೆಸ್ಪಾನ್ಸ್ ಟೂ ಕೋವಿಡ್-19 ಎಪಿಡೆಮಿಕ್ (ಫೋರ್ಸ್) ಎಂಬ ಶೀರ್ಷಿಕೆಯಡಿ ಸಿದ್ಧಪಡಿಸಿದ 44 ಪುಟಗಳ ವರದಿಯಲ್ಲಿ, ಫೋರ್ಸ್ ತಂಡದ ಸದಸ್ಯರು ಎಂದು ತಮ್ಮನ್ನು ಕರೆದುಕೊಂಡಿರುವ ಅಧಿಕಾರಿಗಳು, ಅತಿಶ್ರೀಮಂತರ ಮೇಲಿನ ತೆರಿಗೆಯನ್ನು ಶೇಕಡ 40ಕ್ಕೆ ಹೆಚ್ಚಿಸುವುದೂ ಸೇರಿದಂತೆ ಹಲವು ಸಲಹೆಗಳನ್ನು ನೀಡಿದ್ದಾರೆ. ಸಾಂಕ್ರಾಮಿಕ ಸೆಸ್ ಹಾಗೂ ವಿದೇಶಿ ಕಂಪೆನಿಗಳ ಮೇಳೆ ಹೆಚ್ಚಿನ ತೆರಿಗೆ ವಿಧಿಸುವುದು ಕೂಡಾ ಸಲಹೆಗಳಲ್ಲಿ ಸೇರಿದೆ.

2019-20ರ ಅಂದಾಜು ತೆರಿಗೆ ಆದಾಯವನ್ನು 24.6 ಲಕ್ಷ ಕೋಟಿಯಿಂದ 21.6 ಲಕ್ಷ ಕೋಟಿಗೆ ಇಳಿಸಲಾಗಿದೆ. 2020-21ನೇ ಸಾಲಿಗೆ ಕೂಡಾ ಗುರಿ ಶೇಕಡ 12ರಷ್ಟು ಅಧಿಕ ಅಂದರೆ 24.2 ಲಕ್ಷ ಕೋಟಿ ರೂಪಾಯಿ. ಆದರೆ ಆರ್ಥಿಕ ಹಿಂಜರಿತ ಮತ್ತು ಕೋವಿಡ್-19 ಸ್ಥಿತಿ ನೇರ ತೆರಿಗೆ ಸಂಗ್ರಹಕ್ಕೆ ಹೊಡೆತ ನೀಡಲಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News