×
Ad

ಟ್ವೆಂಟಿ-20 ವಿಶ್ವಕಪ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಅಪ್ರತಿಮ ಕ್ಷಣ: ಯುವರಾಜ್ ಸಿಂಗ್

Update: 2020-04-27 10:46 IST

ಮುಂಬೈ: ಚೊಚ್ಚಲ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸ್ಟುವರ್ಟ್ ಬ್ರಾಡ್‌ರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿರುವುದು ವಿಶ್ವ ಕ್ರಿಕೆಟ್‌ನ ಅತ್ಯಂತ ಅಪ್ರತಿಮ ಕ್ಷಣಗಳಲ್ಲಿ ಒಂದಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.

ಸೆ.19, 2007ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಪರ ಯುವರಾಜ್ ಸಿಂಗ್ ಉತ್ತಮ ಪ್ರದರ್ಶನ ನೀಡಿ ತಂಡದ ಸ್ಕೋರ್‌ನ್ನು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 2018ಕ್ಕೆ ತಲುಪಿಸಲು ನೆರವಾಗಿದ್ದರು.

13 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪಂದ್ಯದಲ್ಲಿ ಯುವರಾಜ್ ಸಿಂಗ್ ಆಡಿರುವ ಆಟದ ನಿಖರವಾದ ಕ್ಷಣವನ್ನು ಭಾರತೀಯ ಅಭಿಮಾನಿಗಳು ಟಿವಿ ಪರದೆಗಳಲ್ಲಿ ಈಗಲೂ ನೋಡಲು ಬಯಸುತ್ತಾರೆ. ಯುವರಾಜ್ ಅವರ ಹೆಸರು ವಿಶ್ವಕಪ್ ಇತಿಹಾಸದಲ್ಲಿ ಅಪೂರ್ವ ದಾಖಲೆಯಾಗಿ ಉಳಿದಿದೆ.

2007ರಲ್ಲಿ ಐಸಿಸಿ ವರ್ಲ್ಡ್ ಟ್ವೆಂಟಿ-20 ಉದ್ಘಾಟನಾ ಆವೃತ್ತಿಯಲ್ಲಿ ಇಂಗ್ಲೆಂಡ್‌ನ ಬೌಲರ್ ಸ್ಟುವರ್ಟ್ ಬ್ರಾಡ್‌ರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದಾಗ ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಹೇಗೆ ಕೋಪಗೊಂಡರು ಎಂದು ಇತ್ತೀಚೆಗೆ ಯುವರಾಜ್ ನೆನಪಿಸಿಕೊಂಡಿದ್ದರು. ಯುವರಾಜ್ 16 ಎಸೆತಗಳನ್ನು ಎದುರಿಸಿದ್ದರು. 3 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಲ್ಲಿ 58 ರನ್ ಗಳಿಸಿದರು. ಅಂತಿಮವಾಗಿ ಭಾರತವು 18 ರನ್‌ಗಳ ಅಂತರದಿಂದ ಜಯಗಳಿಸಿತ್ತು.

ಕೆಲವು ವಾರಗಳ ಹಿಂದೆ (ಸೆ.5, 2007) ಓವಲ್‌ನಲ್ಲಿ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಡಿಮಿಟ್ರಿ ಮಸ್ಕರೇನ್ಹಸ್ ಅವರು ಯುವರಾಜ್ ಸಿಂಗ್ ಅವರ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿದ್ದರು. ಡಿಮಿಟ್ರಿ ಅವರು ಯುವರಾಜ್ ಸಿಂಗ್‌ರ ಕೊನೆಯ ಓವರ್‌ನಲ್ಲಿ ಮೊದಲ ಎಸೆತದಲ್ಲಿ ರನ್ ಗಳಿಸಲಿಲ್ಲ. ಆದರೆ ಬಳಿಕ ಐದು ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದು ಯುವರಾಜ್‌ಗೆ ಆಘಾತವಾಗಿತ್ತು.

       ಇಂಗ್ಲೆಂಡ್ ವಿರುದ್ಧ ಆರು ಸಿಕ್ಸರ್‌ಗಳನ್ನು ದಾಖಲಿಸಲು ಸಾಧ್ಯವಾಗಿರುವುದದಕ್ಕೆ ನನಗೆ ಸಂತೋಷವಾಗಿದೆ ಎಂದು ಯುವರಾಜ್ ಬಿಬಿಸಿ ಪೊಡ್ಕಾಸ್ಟ್ ಹೇಳಿದರು.

‘‘ನಾನು ಆರನೇ ಸಿಕ್ಸ್‌ನ್ನು ಹೊಡೆದಾಗ ಮೊದಲ ನೋಟವು ಫ್ರೆಡ್ಡಿ ಕಡೆಗೆ ಇತ್ತು, ಬಳಿಕ ಡಿಮಿಟ್ರಿ ಮುಖ ನೋಡಿದೆ. ಅವರು ನನಗೆ ಒಂದು ಸ್ಮೈಲ್ ನೀಡಿದರು.

‘‘ಸ್ಟುವರ್ಟ್ ಬ್ರಾಡ್ ಅವರ ತಂದೆ ಕ್ರಿಸ್ ಅವರೊಂದಿಗಿನ ನಂತರದ ಸಂಭಾಷಣೆಯನ್ನು ಯುವರಾಜ್ ನೆನಪಿಸಿಕೊಂಡರು. ಬ್ರಾಡ್ ಸೀನಿಯರ್ ತನ್ನ ಮಗನ ವೃತ್ತಿಜೀವನವನ್ನು ‘ಬಹುತೇಕ’ ಮುಗಿಸಲು ಸಹಿ ಮಾಡಿದ ಜರ್ಸಿಯನ್ನು ಕೇಳಿದ್ದನ್ನು ಅವರು ಬಹಿರಂಗಪಡಿಸಿದರು.

 ಸ್ಟುವರ್ಟ್ ಬ್ರಾಡ್ ತಂದೆ ಕ್ರಿಸ್ ಬ್ರಾಡ್ ಅವರು ಮರುದಿನ ನನ್ನ ಬಳಿಗೆ ಬಂದು ‘‘ನೀವು ನನ್ನ ಮಗನ ವೃತ್ತಿಜೀವನವನ್ನು ಬಹುತೇಕ ಮುಗಿಸಿದ್ದೀರಿ ಮತ್ತು ಈಗ ನೀವು ಅವರಿಗೆ ಶರ್ಟ್ ಸಹಿ ಹಾಕಿ ನೀಡಬೇಕಾಗಿದೆ’ ಎಂದು ಯುವರಾಜ್ ಹೇಳಿದರು.

      ‘‘ ನಾನು ನನ್ನ ಇಂಡಿಯಾ ಜರ್ಸಿಯನ್ನು ನೀಡಿದ್ದೇನೆ ಮತ್ತು ಸ್ಟುವರ್ಟ್‌ಗೆ ಒಂದು ಸಂದೇಶವನ್ನು ಬರೆದಿದ್ದೇನೆ. ನನ್ನ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದೇನೆ. ಹೀಗಾಗಿ ಅದರ ಅನುಭವ ಆಗಿದೆ. ನಿಮಗೆ ಆಗಿರುವ ಅನುಭವವನ್ನು ಅರ್ಥಮಾಡಿಕೊಂಡಿದ್ದೇ.ೆ ಇಂಗ್ಲೆಂಡ್ ಕ್ರಿಕೆಟ್‌ನ ಭವಿಷ್ಯ ಒಳ್ಳೆಯದಾಗಲಿ ಎಂದು ಹಾರೈಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News