ಪಾಕಿಸ್ತಾನದ ಸನಾ ಮಿರ್‌ಗೆ ಐಸಿಸಿ ಅಭಿನಂದನೆ
ಕರಾಚಿ: ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಪಾಕಿಸ್ತಾನದ ಮಹಿಳಾ ತಂಡದ ಮಾಜಿ ನಾಯಕಿ ಸನಾ ಮಿರ್ ಅವರನ್ನು ಅತ್ಯುತ್ತಮ ವೃತ್ತಿಜೀವನಕ್ಕಾಗಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ರವಿವಾರ ಅಭಿನಂದಿಸಿದೆ. ‘‘ಪಾಕಿಸ್ತಾನದ ಮಾಜಿ ನಾಯಕಿ ಸನಾ ಮಿರ್ ಅವರ ಅತ್ಯುತ್ತಮ ವೃತ್ತಿಜೀವನಕ್ಕಾಗಿ ಅಂರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಭಿನಂದನೆ ಸಲ್ಲಿಸಿದೆ. 226 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 137 ಪಂದ್ಯಗಳಲ್ಲಿ ತಂಡವನ್ನು ನಾಯಕಿಯಾಗಿ ಮುನ್ನಡೆಸಿದ್ದರು ’’ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ. 15 ವರ್ಷಗಳ ಸುದೀರ್ಘ ವೃತ್ತಿಜೀವನವನ್ನು ಕೊನೆಗೊಳಿಸಿದ ಮಿರ್ ಶನಿವಾರ ನಿವೃತ್ತಿ ಘೋಷಿಸಿದರು. ಸನಾ ಪಾಕಿಸ್ತಾನದ ಪರ 100 ಏಕದಿನ ವಿಕೆಟ್ ಪಡೆದ ಮೊದಲ ಮಹಿಳಾ ಬೌಲರ್. ಬಲಗೈ ಬ್ಯಾಟ್ಸ್‌ವುಮೆನ್ ಸನಾ 2005ರ ಡಿಸೆಂಬರ್‌ನಲ್ಲಿ ಕರಾಚಿಯಲ್ಲಿ ಶ್ರೀಲಂಕಾ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು. 2019ರ ನವೆಂಬರ್‌ನಲ್ಲಿ ಲಾಹೋರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ‘‘ಮಿರ್ ಪಾಕಿಸ್ತಾನ ಮಹಿಳಾ ಕ್ರಿಕೆಟ್‌ನ ಮುಖವಾಗಿದ್ದಾರೆ. ಅತ್ಯಂತ ಸ್ಥಿರ ಪ್ರದರ್ಶನ ನೀಡುವವರಲ್ಲಿ ಒಬ್ಬರು. ಪಾಕಿಸ್ತಾನ ತಂಡದ ಅದ್ಭುತ ನಾಯಕಿ ಮತ್ತು ತಮ್ಮ ದೇಶ ಮತ್ತು ವಿದೇಶಗಳಲ್ಲಿ ಆಟದ ಅತ್ಯುತ್ತಮ ರಾಯಭಾರಿಯಾಗಿದ್ದಾರೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾಹ್ನಿ ಹೇಳಿದ್ದಾರೆ.
‘‘ಸನಾ ತನ್ನ ಅಪಾರ ಅನುಭವವನ್ನು ಕ್ರಿಕೆಟ್‌ಗೆ ಬಳಸಿಕೊಳ್ಳಲು ಮತ್ತು ಅದರ ಬೆಳವಣಿಗೆಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ.ಐಸಿಸಿಯಲ್ಲಿ ಪ್ರತಿಯೊಬ್ಬರ ಪರವಾಗಿ, ನಾನು ಅವರಿಗೆ ಎಲ್ಲ ರೀತಿಯ ಶುಭ ಹಾರೈಸುತ್ತೇನೆ’’ ಎಂದು ಹೇಳಿದರು.
ಏಕದಿನ ಪಂದ್ಯಗಳಲ್ಲಿ 1,000 ರನ್ ಮತ್ತು 100 ವಿಕೆಟ್‌ಗಳನ್ನು ಪಡೆದ ಏಕೈಕ ಪಾಕ್‌ನ ಏಕೈಕ ಆಟಗಾರ್ತಿ. ಅವರು ಮೂರು ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ (2009, 2013 ಮತ್ತು 2017) ಮತ್ತು ಆರು ಐಸಿಸಿ ಮಹಿಳಾ ಟ್ವೆಂಟಿ -20 ವಿಶ್ವಕಪ್ (2009, 2010, 2012, 2014, 2016 ಮತ್ತು 2018) ಗಳಲ್ಲಿ ಆಡಿದ್ದಾರೆ.