×
Ad

ಸಿಗಡಿ ಸಿಪ್ಪೆಯಿಂದ ಪರಿಸರ ಸ್ನೇಹಿ ಪ್ಲಾಸ್ಟಿಕ್ ತಯಾರಿಸಿದ ವಿದ್ಯಾರ್ಥಿನಿ

Update: 2020-04-28 17:28 IST
Photo: dailytelegraph.com.au

ಹೊಸದಿಲ್ಲಿ: ಆಸ್ಟ್ರೇಲಿಯಾದ ಅಡಿಲೇಡ್ ನಗರದ ನಿವಾಸಿಯಾಗಿರುವ ಭಾರತೀಯ-ಆಸ್ಟ್ರೇಲಿಯನ್ ಬಾಲಕಿ, 16 ವರ್ಷದ ಏಂಜಲಿನಾ ಅರೋರಾ ಸಿಗಡಿ ಸಿಪ್ಪೆಗಳನ್ನು ಬಳಸಿ ಪರಿಸರ ಸ್ನೇಹಿ ಪ್ಲಾಸ್ಟಿಕ್ ತಯಾರಿಸಿ ಎಲ್ಲರನ್ನು ಚಕಿತಗೊಳಿಸಿದ್ದಾಳೆ. ಆಕೆ ತಯಾರಿಸಿರುವ ಈ ಪ್ಲಾಸ್ಟಿಕ್ ಕೇವಲ ಒಂದೇ ತಿಂಗಳಲ್ಲಿ ಕರಗಬಲ್ಲದು.

ಸಿಡ್ನಿ ಗರ್ಲ್ಸ್ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಈಕೆ ಮೊದಲು ಬಾಳೆಹಣ್ಣಿನ ಸಿಪ್ಪೆ ಮತ್ತಿತರ ತ್ಯಾಜ್ಯಗಳನ್ನು ಬಳಸಿ ಪ್ಲಾಸ್ಟಿಕ್ ತಯಾರಿಸಲು ಯತ್ನಿಸಿದ್ದಳು. ಆದರೆ ಸಿಗಡಿಯ ಸಿಪ್ಪೆ ನೋಡಲು ಪ್ಲಾಸ್ಟಿಕ್ ರೀತಿಯೇ ಇರುವುದನ್ನು ಗಮನಿಸಿದ ಆಕೆ ಇವುಗಳಲ್ಲಿರುವ ಚಿಟಿನ್ ಎಂಬ ಕಾರ್ಬೋಹೈಡ್ರೇಟ್ ಅನ್ನು ಹೊರಕ್ಕೆಳೆದು ಅದನ್ನು ಚಿಟೊಸನ್ ಆಗಿ ಮಾರ್ಪಡಿಸಿ ನಂತರ ಅದನ್ನು ರೇಷ್ಮೆ ಹುಳದ ಗೂಡುಗಳಲ್ಲಿ ಕಂಡು ಬರುವ ಫೈಬ್ರೋಯಿನ್ ಎಂಬ ಪ್ರೊಟೀನ್ ಜತೆ ಮಿಶ್ರಣ ಮಾಡಿದ್ದಳು.

ಇದೀಗ ಆಕೆ ತಾನು ತಯಾರಿಸಿರುವ ಪರಿಸರ ಸ್ನೇಹಿ ಪ್ಲಾಸ್ಟಿಕ್ ಅನ್ನು ವಾಣಿಜ್ಯ ಉದ್ದೇಶಗಳಿಗೆ ತಯಾರಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದು ತನ್ನ ಉತ್ಪನ್ನಕ್ಕೆ ಪೇಟೆಂಟ್ ಪಡೆಯಲು ಯತ್ನಿಸಲಿದ್ದಾಳೆ.

ಆಕೆಯ ಈ ಸಾಧನೆ ಆಕೆಗೆ ಹಲವು ಮನ್ನಣೆಗಳನ್ನು ನೀಡಿದೆ. ಆಕೆಗೆ ಅಮೆರಿಕಾದ ಪ್ರತಿಷ್ಠಿತ ವಿವಿಯ ಸ್ಕಾಲರ್‍ಶಿಪ್ ಲಭಿಸಿದೆ. ಇಂಟೆಲ್ ಇಂಟರ್ ನ್ಯಾಷನಲ್ ಸಾಯನ್ಸ್ ಎಂಡ್ ಇಂಜಿನಿಯರಿಂಗ್ ಫೇರ್‍ನಲ್ಲಿ ಆಕೆ ನಾಲ್ಕನೇ ಸ್ಥಾನ ಗಳಿಸಿದ್ದಾಳೆ. ಅಷ್ಟೇ ಅಲ್ಲದೆ 2018 ಬಿಎಚ್‍ಪಿ ಬಿಲ್ಲಿಟನ್ ಫೌಂಡೇಶನ್ ಸಾಯನ್ಸ್ ಆ್ಯಂಡ್ ಇಂಜಿನಿಯರಿಂಗ್ ಅವಾರ್ಡ್ಸ್ ನಲ್ಲಿ ಆಕೆ ಇನ್ನೊವೇಟರ್ ಟು ಮಾರ್ಕೆಟ್ ಅವಾರ್ಡ್ ಗಳಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News