ಕೊಲ್ಲಿ ರಾಷ್ಟ್ರಗಳಿಂದ ಭಾರತೀಯರ ತೆರವಿಗೆ ಸನ್ನದ್ಧ ಸ್ಥಿತಿಯಲ್ಲಿರಲು ಏರ್ ಇಂಡಿಯಾ, ನೌಕಾಪಡೆಗೆ ಸೂಚನೆ

Update: 2020-04-28 16:44 GMT

ಹೊಸದಿಲ್ಲಿ, ಎ.28: ಕೊರೋನ ವೈರಸ್ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಭಾರತೀಯರ ಸಾಮೂಹಿಕ ತೆರವು ಕಾರ್ಯಾಚರಣೆಗಾಗಿ ತಮ್ಮ ವಿಮಾನಗಳು ಮತ್ತು ಯುದ್ಧನೌಕೆಗಳೊಂದಿಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸರಕಾರವು ಏರ್ ಇಂಡಿಯಾ ಮತ್ತು ನೌಕಾಪಡೆಗೆ ಸೂಚಿಸಿದೆ.

“ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು,ಕೊಲ್ಲಿ ರಾಷ್ಟ್ರಗಳಿಂದ ಭಾರತೀಯರನ್ನು ತೆರವುಗೊಳಿಸಲು ಯೋಜನೆಯೊಂದನ್ನು ಅನ್ವೇಷಿಸುತ್ತಿದ್ದೇವೆ.” ವಿವರವಾದ ತೆರವು ಕಾರ್ಯಾಚರಣೆ ಯೋಜನೆಗಾಗಿ ನಾವು ಏರ್ ಇಂಡಿಯಾ ಮತ್ತು ನೌಕಾಪಡೆಗೆ ಸೂಚಿಸಿದ್ದೇವೆ’ಎಂದು ಉನ್ನತ ಸರಕಾರಿ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿದವು.

 ಕೊರೋನ ವೈರಸ್ ಭೀತಿಯಿಂದಾಗಿ ಕೊಲ್ಲಿ ರಾಷ್ಟ್ರಗಳಲ್ಲಿಯ ಸಾವಿರಾರು ಭಾರತೀಯರು ಸ್ವದೇಶಕ್ಕೆ ಮರಳಲು ಬಯಸಿದ್ದಾರೆ,ಆದರೆ ವಿಮಾನಯಾನಗಳು ಮತ್ತು ಸಾರಿಗೆಯ ಇತರ ವಿಧಾನಗಳ ಅಮಾನತಿನಿಂದಾಗಿ ಅವರು ಅಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಭಾರತವು ಮೇ.3ರವರೆಗೆ ಎಲ್ಲ ಸಾರಿಗೆಗಳನ್ನು ಅಮಾನತುಗೊಳಿಸಿದೆ.

ಸಾಮಾಜಿಕ ಜಾಲತಾಣಗಳು ಮತ್ತು ಇ-ಮೇಲ್‌ಗಳ ಮೂಲಕ ಭಾರತೀಯ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಿರುವ ಬಹಳಷ್ಟು ಭಾರತೀಯರು ತಮ್ಮ ಮನೆಗಳಿಗೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಸರಕಾರವು ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ ಮತ್ತು ಅವರನ್ನು ತೆರವುಗೊಳಿಸಲು ವ್ಯವಸ್ಥೆಗಳನ್ನು ರೂಪಿಸುತ್ತಿದೆ ಎಂದೂ ಸರಕಾರಿ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News