×
Ad

ಲಾಕ್ ಡೌನ್: ವಿದ್ಯಾರ್ಥಿಗಳು ಕೋಟಾದಲ್ಲಿಯೇ ಉಳಿದರೆ ನಮಗೆ ಚುನಾವಣೆಯಲ್ಲಿ ಸಮಸ್ಯೆಯಾಗಲಿವೆ ಎಂದ ಬಿಜೆಪಿ ನಾಯಕ

Update: 2020-04-29 19:08 IST
ಸಾಂದರ್ಭಿಕ ಚಿತ್ರ

ಪಾಟ್ನಾ: ರಾಜಸ್ಥಾನದ ಕೋಟಾದಲ್ಲಿರುವ ಬಿಹಾರದ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಏರ್ಪಾಟು ಮಾಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿರಾಕರಣೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್‍ಡಿಎ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಬಿಜೆಪಿ ನಾಯಕ ಸಂಜಯ್ ಪಾಸ್ವಾನ್ ಹೇಳಿದ್ದಾರೆ.

“ಯಾವ ಭಯದಿಂದ ನಿತೀಶ್ ಕುಮಾರ್ ಅವರು ಕೋಟಾದಿಂದ ರಾಜ್ಯದ ವಿದ್ಯಾರ್ಥಿಗಳನ್ನು ವಾಪಸ್ ಕರೆಸುತ್ತಿಲ್ಲ? ಸರಕಾರಿ ಅಧಿಕಾರಿಗಳು ಅವರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆಂದು ನನಗನಿಸುತ್ತದೆ.  ಈ ರೀತಿಯಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿದ್ಯಾರ್ಥಿಗಳ ಹೆತ್ತವರು ಎನ್‍ಡಿಎಗೆ ಮತ ನೀಡುವ ಮುನ್ನ ಎರಡು ಬಾರಿ ಯೋಚಿಸುತ್ತಾರೆ. ಈ ಕುರಿತಂತೆ ನಿತೀಶ್ ಮತ್ತೊಮ್ಮೆ ಪರಿಶೀಲಿಸಬೇಕಿದೆ,'' ಎಂದು ಪಾಸ್ವಾನ್ ಹೇಳಿದ್ದಾರೆ.

ಆರ್‍ಜೆಡಿ ನಾಯಕ ಶಿವಾನಂದ್ ತಿವಾರಿ ಕೂಡ ಸರಕಾರದ ನಿರ್ಧಾರವನ್ನು ಟೀಕಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಆಡಳಿತ ಜೆಡಿಯು ನಾಯಕ ಅಜಯ್ ಅಶೋಕ್, ಈಗಾಗಲೇ ತಮ್ಮ ವಿದ್ಯಾರ್ಥಿಗಳನ್ನು ಕೋಟಾದಿಂದ ವಾಪಸ್ ಕರೆತಂದಿರುವ ರಾಜ್ಯಗಳು ಕೇಂದ್ರದ ಅನುಮತಿ ಪಡೆದಿದ್ದವೇ ಎಂದು ಯಾರಾದರೂ ಪರಿಶಿಲಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಈ ರಾಜ್ಯಗಳು ಕಾನೂನು ಮುರಿದಿವೆಯೆಂದು ಹೇಳುವುದು ತಪ್ಪಾಗಲಾರದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News