ದಿಲ್ಲಿಯ 529 ಪತ್ರಕರ್ತರಲ್ಲಿ ಕೇವಲ ಮೂವರಲ್ಲಿ ಕೋವಿಡ್-19 ಸೋಂಕು: ಅರವಿಂದ್ ಕೇಜ್ರಿವಾಲ್
Update: 2020-04-29 23:10 IST
ಹೊಸದಿಲ್ಲಿ, ಎ.29: ಕೊರೋನ ವೈರಸ್ ತಪಾಸಣೆಗೊಳಪಟ್ಟಿದ್ದ 529 ಪತ್ರಕರ್ತರ ಪೈಕಿ ಕೇವಲ ಮೂವರು ಪಾಸಿಟಿವ್ ಆಗಿದ್ದಾರೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮುಂಬೈ ಮತ್ತು ಚೆನ್ನೈಗಳಲ್ಲಿ ಹಲವಾರು ಪತ್ರಕರ್ತರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರವು ಕಳೆದ ವಾರ ತಪಾಸಣೆಯನ್ನು ಆರಂಭಿಸಿತ್ತು. ವೈರಸ್ ಕುರಿತು ವರದಿಗಾರಿಕೆಯಲ್ಲಿ ತೊಡಗಿಕೊಂಡಿರುವ ಪತ್ರಕರ್ತರಿಗಾಗಿ ಸರಕಾರವು ವಿಶೇಷ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿತ್ತು.
ಉತ್ತರ ಪ್ರದೇಶ ಮತ್ತು ಕರ್ನಾಟಕದಂತಹ ಹಲವು ರಾಜ್ಯಗಳೂ ಪತ್ರಕರ್ತರನ್ನು ಕೋವಿಡ್-19ರ ತಪಾಸಣೆಗೊಳಪಡಿಸುತ್ತಿವೆ.