ಫ್ಯಾಕ್ಟ್ ಚೆಕ್: ಹಳೆ ವೀಡಿಯೋ ಬಳಸಿ ಮುಸ್ಲಿಮರು ಆಹಾರದಲ್ಲಿ ಉಗುಳಿ ಕೊರೋನ ಹರಡಲು ಯತ್ನಿಸುತ್ತಿದ್ದಾರೆಂಬ ಸುಳ್ಳಾರೋಪ

Update: 2020-04-30 10:01 GMT

ಹೊಸದಿಲ್ಲಿ: ಧಾರ್ಮಿಕ ಗುರುವೊಬ್ಬರು ಸೌಟಿನಲ್ಲಿ ಸ್ವಲ್ಪ ಆಹಾರ ಎತ್ತಿಕೊಂಡು ನಂತರ ಅದನ್ನು ತನ್ನ ಬಾಯಿ ಹತ್ತಿರಕ್ಕೆ ತಂದು ನಂತರ ಅದನ್ನು ಊದುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ನಮ್ಮ ದೇಶದಲ್ಲಿ ಬಡವರಿಗಾಗಿ ಪರಿಹಾರ ಕಾರ್ಯದಲ್ಲಿ ತೊಡಗಿರುವ ಇಸ್ಲಾಮಿಕ್ ಸಹೋದರರು ಕೊರೋನವೈರಸ್ ಅನ್ನು ಹೇಗೆ ಇನ್ನಷ್ಟು ಹರಡಿಸಲು ಯತ್ನಿಸುತ್ತಿದ್ದಾರೆಂದು ನೋಡಿ. ನಿಮ್ಮ ಮುಚ್ಚಿದ ಕಣ್ಣುಗಳನ್ನು ತೆರೆಯಲು ಯತ್ನಿಸಿ,'' ಎಂಬ ಸಂದೇಶವೂ ಈ ಪೋಸ್ಟ್ ಜತೆಗಿದೆ. ಮುಸ್ಲಿಮರು ಆಹಾರದ ಮೇಲೆ ಉಗುಳಿ ಈ ಮೂಲಕ ಕೊರೋನವೈರಸ್ ಹರಡಲು ಯತ್ನಿಸುತ್ತಿದ್ದಾರೆಂಬ ವಿವರಣೆಯನ್ನು ನೀಡಲಾಗಿದೆ. ‘NamoAlways’ ಎಂಬ ಫೇಸ್ ಬುಕ್ ಪುಟದ ಈ ಪೋಸ್ಟ್ ಅನ್ನು ಈಗಾಗಲೇ 8,200ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

Full View

ಇದು ಹಳೆಯ ವೀಡಿಯೋ: ಡಿಜಿಟಲ್ ವೆರಿಫಿಕೇಶನ್ ಟೂಲ್ ಇನ್‍ವಿಡ್ ಬಳಸಿ ಈ ವೀಡಿಯೋವನ್ನು ವಿವಿಧ ಕೋನಗಳಿಂದ ಪರಿಶೀಲಿಸಿದ altnews.in ನಂತರ ಈ ವೀಡಿಯೋದ ಒಂದು ಫೋಟೋವನ್ನು ಗೂಗಲ್‍ನಲ್ಲಿ ರಿವರ್ಸ್ ಸರ್ಚ್ ಮಾಡಿದಾಗ ಅದೇ ವೀಡಿಯೋ ಯುಟ್ಯೂಬ್‍ನಲ್ಲಿ ಡಿಸೆಂಬರ್ 15, 2018ರಂದು ಪೋಸ್ಟ್ ಆಗಿತ್ತು ಎಂದು ಕಂಡುಕೊಂಡಿತ್ತು.

ಆದುದರಿಂದ ಈಗ ವೈರಲ್ ಆಗಿರುವ ವೀಡಿಯೋಗೂ ಕೊರೋನವೈರಸ್‍ಗೂ ಸಂಬಂಧವಿಲ್ಲ ಎಂಬುದು ಸ್ಪಷ್ಟ.

Full View

ಆ ಹಳೆಯ ವೀಡಿಯೋ ಏನು ಎಂಬ ಕುರಿತು altnews.in ಇಸ್ಲಾಮಿಕ್ ವಿದ್ವಾಂಸರೊಬ್ಬರನ್ನು ಕೇಳಿದಾಗ ಅವರು ಉತ್ತರಿಸಿ ಈ ಪದ್ಧತಿಗೆ “ಫತೀಹ ಜಲಾನ'' ಎನ್ನುತ್ತಾರೆ ಎಂದರು. “ಆಹಾರ ಬೇಯಿಸಿದ ನಂತರ ಅದರ ಮೇಲೆ ಕೆಲ ಕುರಾನ್  ಭಾಗಗಳನ್ನು ಪಠಿಸಿ  ಪ್ರಾರ್ಥನೆ ಸಲ್ಲಿಸುವುದು ಅಥವಾ  ರೋಗಗಳಿಂದ ಮುಕ್ತಿ ನೀಡಲು ಅಥವಾ ಯಾವುದೇ ಬಯಕೆ ಈಡೇರಿಸಲು ಬೇಡಿಕೊಳ್ಳಲಾಗುತ್ತದೆ. ಕೆಲವರು ಈ ಸಂದರ್ಭ ಬಾಯಿಯಿಂದ ಊದುತ್ತಾರೆ. ಆಹಾರವನ್ನು ಸ್ವಲ್ಪ ತೆಗೆದು ಬರ್ಕತ್ (ಒಳ್ಳೆಯುದಾಗಲಿ)ಗಾಗಿ ಎಂದು ಬೇಡುತ್ತಾರೆ. ನಮಾಝ್ ನಂತರ ಮಸೀದಿಗಳಿಂದ ಹೊರಬರುವವರಿಂದ ಮಕ್ಕಳ ಮೇಲೆ ಗಾಳಿ ಊದಲು ಹೇಳಲಾಗುತ್ತದೆ. ಇದು ಅಲ್ಲಾಹ್ ನೀಡಿದ ಕೊಡುಗೆ ಎಂದು ನಂಬಲಾಗುತ್ತದೆ,'' ಎಂದು ಅವರು ತಿಳಿಸಿದರು.

ಅಷ್ಟಕ್ಕೂ ಈ ‘ಫತೀಹ ಜಲಾನ' ಒಂದು ಪ್ರಾಚೀನ ಪದ್ಧತಿಯಾಗಿದ್ದು, ಈಗಲೂ ಕೆಲ ಜನ ಅದನ್ನು ಅನುಸರಿಸುತ್ತಾರೆ.

Writer - ಜಿಗ್ನೇಶ್ ಪಟೇಲ್, altnews.in

contributor

Editor - ಜಿಗ್ನೇಶ್ ಪಟೇಲ್, altnews.in

contributor

Similar News