ಫ್ಯಾಕ್ಟ್ ಚೆಕ್: ಹಿಟ್ ಆ್ಯಂಡ್ ರನ್ ಘಟನೆಗೆ ಕೋಮು ಬಣ್ಣ ನೀಡಿದ ಜಾಲತಾಣಿಗರು

Update: 2020-04-30 13:31 GMT

ಹೊಸದಿಲ್ಲಿ: ಕಾರೊಂದು ಹಠಾತ್ತನೆ ರಸ್ತೆ ಬದಿಗೆ ತಿರುಗಿ ಪಾದಚಾರಿಗಳಿಬ್ಬರನ್ನು ಸಾಯಿಸಿದ ವೀಡಿಯೋವೊಂದು ವೈರಲ್ ಆಗಿದೆ. ಕಾರಿನ ಚಾಲಕ ಮುಸ್ಲಿಂ ಮಹಿಳೆ ಮತ್ತಾಕೆಯ ಅಪ್ರಾಪ್ತೆ ಪುತ್ರಿಯನ್ನು ಉದ್ದೇಶಪೂರ್ವಕವಾಗಿ ಕೊಂದಿದ್ದಾನೆಂಬ ಸಂದೇಶವೂ ಈ ವೀಡಿಯೋ ಜತೆ ಹರಿದಾಡುತ್ತಿದೆ. ದೇಶದಲ್ಲಿ ಇಸ್ಲಾಮೋಫೋಬಿಯ ಅಥವಾ ಇಸ್ಲಾಂ ಕುರಿತಾದ ದ್ವೇಷ ಭಾವನೆ ಹೆಚ್ಚಾಗುತ್ತಿದೆ ಎಂಬುದನ್ನು ಈ ಘಟನೆ ಸಾಬೀತು ಪಡಿಸುತ್ತದೆ ಎಂದು ಹಲವು ಸಾಮಾಜಿಕ ಜಾಲತಾಣಿಗರು ಹೇಳಿಕೊಂಡಿದ್ದಾರೆ.

Full View

ಮಾರ್ಚ್ 27ರಂದು ಯೂತ್ ಟಿವಿ ನ್ಯೂಸ್ ಎಂಬ ಫೇಸ್ ಬುಕ್ ಪುಟ ಈ ವೀಡಿಯೋ ಪೋಸ್ಟ್ ಮಾಡಿ ಹೀಗೆ ಬರೆದಿತ್ತು. “ಈ ವೀಡಿಯೋ ಉತ್ತರ ಪ್ರದೇಶದ್ದು. ಆಲ್ಟೋ ಕಾರಿನ ಚಾಲಕ ಮುಸ್ಲಿಂ ಮಹಿಳೆ ಮತ್ತಾಕೆಯ ಅಪ್ರಾಪ್ತೆ ಬಾಲಕಿಯನ್ನು ಉದ್ದೇಶಪೂರ್ವಕವಾಗಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾದಿಂದ ಸಾಯಿಸಿರಬಹುದು.'' ಈ ಪೋಸ್ಟ್ ಅನ್ನು  2,800ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಫೇಸ್ ಬುಕ್ ಪೇಜ್ ನ್ಯೂಸ್ ಐಡಲ್ ಕೂಡ ಇದೇ ವೀಡಿಯೋ ಶೇರ್ ಮಾಡಿ ಹಿಂದಿಯಲ್ಲಿ ವಿವರಣೆ ನೀಡಿತ್ತು.

ಆದರೆ ಇದು ಸುಳ್ಳೆಂದು altnews.in ಕಂಡು ಹಿಡಿದಿದೆ. ಈ ಘಟನೆಯ ಸಂತ್ರಸ್ತರು ಹಿಂದು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಎಪ್ರಿಲ್ 26, 2020ರಂದು ಉತ್ತರ ಪ್ರದೇಶದ ಬಲ್ಲಿಯ ಜಿಲ್ಲೆಯ ರಸ್ರಾ ಪಟ್ಟಣದಲ್ಲಿ ಈ ಹಿಟ್ ಎಂಡ್ ರನ್ ಘಟನೆ ನಡೆದಿತ್ತು. ಮನೆಗೆ ಮರಳುತ್ತಿದ್ದ ಉಷಾ ದೇವಿ ಹಾಗೂ ಆಕೆಯ 12 ವರ್ಷದ ಪುತ್ರಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದರು ಎಂದು ಬಲ್ಲಿಯಾ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಂಬ ಮಾಹಿತಿಯೂ ದೊರಕಿದೆ.

Writer - ಜಿಗ್ನೇಶ್ ಪಟೇಲ್, altnews.in

contributor

Editor - ಜಿಗ್ನೇಶ್ ಪಟೇಲ್, altnews.in

contributor

Similar News