ವಿಲಿಯಮ್ಸನ್‌ಗೆ ನ್ಯೂಝಿಲ್ಯಾಂಡ್ ಕ್ರಿಕೆಟ್‌ನ ವರ್ಷದ ಏಕದಿನ ಆಟಗಾರ ಪ್ರಶಸ್ತಿ

Update: 2020-04-30 17:46 GMT

ವೆಲ್ಲಿಂಗ್ಟನ್, ಎ.30: ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ನ್ಯೂಝಿಲ್ಯಾಂಡ್‌ನ ವರ್ಷದ ಪುರುಷರ ಏಕದಿನ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಸ್ ಟೇಲರ್ ಹಾಗೂ ವೈಟ್ ಫರ್ನ್ಸ್ ತಂಡದ ನಾಯಕಿ ಸೋಫಿ ಡಿವೈನ್ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಟ್ವೆಂಟಿ-20 ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿಗಳನ್ನು ಪಡೆದರು.

ಸುಝಿ ಬೇಟ್ಸ್ ಅವರು ವರ್ಷದ ಮಹಿಳಾ ಏಕದಿನ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಲಿಯಮ್ಸನ್ ಪಾಲಿಗೆ 2019 ಯಶಸ್ವಿ ವರ್ಷವಾಗಿದ್ದು, ವೈಯಕ್ತಿಕ ಕೊಡುಗೆ ಮುಖಾಂತರ ನ್ಯೂಝಿಲ್ಯಾಂಡ್ ತಂಡ ಏಕದಿನ ವಿಶ್ವಕಪ್ ಫೈನಲ್‌ಗೆ ಏರಲು ನೆರವಾಗಿದ್ದರು. 29ರ ಹರೆಯದ ವಿಲಿಯಮ್ಸನ್ ವಿಶ್ವಕಪ್‌ನಲ್ಲಿ 82ರ ಸರಾಸರಿಯಲ್ಲಿ ಎರಡು ಶತಕಗಳ ಸಹಿತ ಒಟ್ಟು 578 ರನ್ ಗಳಿಸಿದ್ದಾರೆ. ಈ ಸಾಹಸಕ್ಕೆ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಕಿವೀಸ್‌ನ ಹಿರಿಯ ಬ್ಯಾಟ್ಸ್‌ಮನ್ ಟೇಲರ್ 130ರ ಸ್ಟ್ರೈಕ್‌ರೇಟ್‌ನಲ್ಲಿ 330 ರನ್ ಗಳಿಸುವುದರೊಂದಿಗೆ ನ್ಯೂಝಿಲ್ಯಾಂಡ್ ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ಗೌರವ ಪಡೆಯಲು ನೆರವಾಗಿದ್ದರು. ಮಹಿಳಾ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ3 ಪಂದ್ಯಗಳಲ್ಲಿ 2 ಬಾರಿ ಅರ್ಧಶತಕಗಳನ್ನು ಸಿಡಿಸಿದ್ದ ಬೇಟ್ಸ್ ವರ್ಷದ ಆಟಗಾರ್ತಿ ಪ್ರಶಸ್ತಿ ಜಯಿಸಿದ್ದಾರೆ. ಸ್ವದೇಶದಲ್ಲಿ ದ.ಆಫ್ರಿಕಾ ವಿರುದ್ಧ ಏಕೈಕ ಏಕದಿನ ಸರಣಿಯನ್ನು ಆಡಿದ್ದರೂ 42ರ ಸರಾಸರಿಯಲ್ಲಿ142 ರನ್ ಗಳಿಸಿದ್ದಾರೆ. ಮಹಿಳಾ ಟ್ವೆಂಟಿ-20ಯಲ್ಲಿ ಡಿವೈನ್ ಚೊಚ್ಚಲ ಟಿ-20 ಶತಕ ಸಿಡಿಸಿದ್ದರು. ಡಿವೈನ್ 132ರ ಸ್ಟ್ರೈಕ್‌ರೇಟ್‌ನಲ್ಲಿ 71ರ ಸರಾಸರಿಯಲ್ಲಿ ಒಟ್ಟು 429 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News