ಕೊರೋನವೈರಸ್ ಹಿನ್ನೆಲೆ: ದಿಲ್ಲಿಯ ಸಿಆರ್‌ಪಿಎಫ್‌ನ ಪ್ರಧಾನ ಕಚೇರಿಗೆ ಬೀಗಮುದ್ರೆ
ಹೊಸದಿಲ್ಲಿ, ಮೇ 3: ಹಿರಿಯ ಅಧಿಕಾರಿಯೊಬ್ಬರ ವೈಯಕ್ತಿಕ ಸಿಬ್ಬಂದಿಗೆ ಕೋವಿಡ್-19 ವೈರಸ್ ತಗಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಪ್ರಧಾನ ಕಚೇರಿಯನ್ನು ನೈರ್ಮಲೀಕರಣಗೊಳಿಸುವ ಸಲುವಾಗಿ ಬೀಗಮುದ್ರೆ ಹಾಕಲಾಗಿದೆ.
ಮುಂದಿನ ಆದೇಶದ ತನಕ ಲೋಧಿ ರೋಡ್ ಪ್ರದೇಶದಲ್ಲಿರುವ ಕಟ್ಟಡದೊಳಗೆ ಪ್ರವೇಶಿಸಲು ಯಾರಿಗೂ ಅವಕಾಶವಿಲ್ಲ.
ದಿಲ್ಲಿ ಬೆಟಾಲಿಯನ್‌ನ 122 ಯೋಧರಿಗೆ ಎರಡು ವಾರಗಳಲ್ಲಿ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಶನಿವಾರದಂದು ಭಾರತದ ಅತ್ಯಂತ ಹಳೆಯ ಕೇಂದ್ರೀಯ ಅರೆಸೇನಾ ಪಡೆಗಳ ಪೈಕಿ ಒಂದಾಗಿರುವ ಸಿಆರ್‌ಪಿಎಫ್ ತಿಳಿಸಿದೆ.
ಕೋವಿಡ್-19 ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗುತ್ತಿರುವ ಕಾರಣ ಪ್ಯಾರಾಮಿಲಿಟರಿ ಫೋರ್ಸ್‌ನ 31ನೇ ಬೆಟಾಲಿಯನ್ ನೆಲೆಸಿರುವ ಪೂರ್ವ ದಿಲ್ಲಿಯ ಮಯೂರ್ ವಿಹಾರದ ಮೂರನೇ ಹಂತವನ್ನ ಸಂಪೂರ್ಣ ಮುಚ್ಚಲಾಗಿದೆ. ಅರೆಸೇನ ಪಡೆಯ ಇತರ 100 ಮಂದಿಯ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.
ಕೋವಿಡ್-19 ಸೋಂಕಿಗೆ ಒಳಗಾಗಿರುವ ಯೋಧರನ್ನು ಮಂಡವಾಲಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತೀಚೆಗೆ ಮಧ್ಯ ದಿಲ್ಲಿಯಲ್ಲಿರುವ ನೀತಿ ಆಯೋಗದ ಪ್ರಧಾನ ಕಚೇರಿಗೆ 48 ಗಂಟೆಗಳ ಕಾಲ ಬೀಗಮುದ್ರೆ ಹಾಕಲಾಗಿತ್ತು. ನೀತಿ ಆಯೋಗದ ಕಚೇರಿಯ ಉದ್ಯೋಗಿಗೆ ಕೊರೊನ ವೈರಸ್ ಸೋಂಕು ತಗಲಿರುವುದಕ್ಕ ಈ ಕ್ರಮ ಕೈಗೊಳ್ಳಲಾಗಿತ್ತು.
.