ಭಾರತದಲ್ಲಿ ಕೋವಿಡ್-19 ಸಾವುಗಳ ದರ ವಿಶ್ವದಲ್ಲೇ ಕನಿಷ್ಠ: ಕೇಂದ್ರ ಸಚಿವ ಹರ್ಷವರ್ಧನ್

Update: 2020-05-03 17:17 GMT

ಹೊಸದಿಲ್ಲಿ,ಮೇ 3: ಭಾರತದಲ್ಲಿಯ ಶೇ.3.2 ಕೊರೋನ ವೈರಸ್ ಸಾವುಗಳ ದರವು ವಿಶ್ವದಲ್ಲಿಯೇ ಕನಿಷ್ಠವಾಗಿದೆ ಮತ್ತು ಈವರೆಗೆ 10,000ಕ್ಕೂ ಅಧಿಕ ಕೊರೋನ ವೈರಸ್ ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ರವಿವಾರ ಇಲ್ಲಿ ತಿಳಿಸಿದರು.

ಇನ್ನೂ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ 15 ದಿನಗಳಲ್ಲಿ ಪ್ರಕರಣಗಳು ಇಮ್ಮಡಿಗೊಳ್ಳುವ ದರ 10.5 ದಿನಗಳಾಗಿದ್ದರೆ ಇಂದು ಅದು ಸುಮಾರು 12 ದಿನಗಳಾಗಿವೆ ಎಂದು ಲೇಡಿ ಹಾರ್ಡಿಂಜ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು ಹೇಳಿದರು.

ಕಳೆದ 24 ಗಂಟೆಗಳಲ್ಲಿ 2,644 ಹೊಸ ಪ್ರಕರಣಗಳು ಮತ್ತು 83 ಸಾವುಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 39,980ಕ್ಕೆ ಮತ್ತು ಸಾವುಗಳ ಸಂಖ್ಯೆ 1,301ಕ್ಕೇರಿದೆ. ಪ್ರಸಕ್ತ 28,046 ಪ್ರಕರಣಗಳು ಸಕ್ರಿಯವಾಗಿದ್ದು,10,633 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯವು ರವಿವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News