ಕೊರೋನ ವೈರಸ್ ನಿಂದ ಒಂದು ಲಕ್ಷ ಅಮೆರಿಕನ್ನರು ಸಾಯಬಹುದು: ಟ್ರಂಪ್

Update: 2020-05-04 15:41 GMT

ವಾಶಿಂಗ್ಟನ್, ಮೇ 4: ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಅಮೆರಿಕದಲ್ಲಿ ಒಂದು ಲಕ್ಷದಷ್ಟು ಮಂದಿ ಸಾಯಬಹುದು ಎಂದು ನಾನು ಭಾವಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಹೇಳಿದ್ದಾರೆ. ಆದರೆ, ವರ್ಷದ ಕೊನೆಯ ವೇಳೆಗೆ ಈ ಮಾರಕ ಸಾಂಕ್ರಾಮಿಕಕ್ಕೆ ಲಸಿಕೆ ಸಿದ್ಧಗೊಳ್ಳುವ ಭರವಸೆಯಿದೆ ಎಂದರು.

ಫಾಕ್ಸ್ ನ್ಯೂಸ್ ಏರ್ಪಡಿಸಿದ ಎರಡು ಗಂಟೆಗಳ ಅವಧಿಯ ಟೌನ್‌ಹಾಲ್ ಚರ್ಚೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಮಾರಕ ಸಾಂಕ್ರಾಮಿಕಕ್ಕೆ ಚೀನಾ ಹೊಣೆ ಎಂದು ಒಮ್ಮೆ ಹೇಳಿದ ಅವರು, ಅಮೆರಿಕದ ಆರ್ಥಿಕತೆಯು ಕ್ಷಿಪ್ರವಾಗಿ ಚೇತರಿಸುತ್ತದೆ ಎಂದು ಇನ್ನೊಮ್ಮೆ ಹೇಳಿದರು.

ಈ ಕಾರ್ಯಕ್ರಮವನ್ನು ಫಾಕ್ಸ್ ನ್ಯೂಸ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಏರ್ಪಡಿಸಿತ್ತು.

ಅಮೆರಿಕದಲ್ಲಿ ಈವರೆಗೆ 11 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್-19 ಸಾಂಕ್ರಾಮಿಕದ ಸೋಂಕಿಗೆ ಒಳಗಾಗಿದ್ದಾರೆ ಹಾಗೂ 67,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅದೂ ಅಲ್ಲದೆ, ಅಮೆರಿಕದಲ್ಲಿ ಹೆಚ್ಚಿನ ಶಾಲೆಗಳು ಮತ್ತು ಹೆಚ್ಚಿನ ಉದ್ಯಮಗಳು ಬಂದ್ ಆಗಿವೆ.

ನಾವು 75, 85 ಸಾವಿರದಿಂದ ಒಂದು ಲಕ್ಷದವರೆಗೆ ಜನರನ್ನು ಕಳೆದುಕೊಳ್ಳಲಿದ್ದೇವೆ. ಇದು ಭಯಾನಕ ಸಂಗತಿಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News