ಕಾಪು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಆನ್‌ಲೈನ್ ರಮಝಾನ್ ಫೆಸ್ಟ್

Update: 2020-05-05 14:35 GMT

ಕಾಪು, ಮೇ 5: ಪೊಲಿಪು ಖುವ್ವತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆನ್‌ಲೈನ್ ರಮಝಾನ್ ಫೆಸ್ಟ್ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಕಾಪು ಉಸ್ತಾದ್ ಪಿ.ಬಿ.ಅಹಮದ್ ಮುಸ್ಲಿಯಾರ್ ದುವಾ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಖತೀಬ್ ಇರ್ಷಾದ್ ಸಅದಿ ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ಅಬ್ದುರ್ರಝಾಕ್ ಅಲ್ಖಾಸಿಮಿ, ಬದ್ರುದ್ದೀನ್ ಅಹ್ಸನಿ ಕೊಳಕೆ, ಅಝೀಝ್ ಹಿಮಮಿ, ಅರ್ಷಾದ ಸಖಾಫಿ, ಪುರಸಭೆ ಸದಸ್ಯ ಇಮ್ರಾನ್, ಎಚ್.ಮೊಹಮ್ಮದ್, ಗಲ್ಫ್ ಶಾಖೆಯ ಸದಸ್ಯರು ಶುಭ ಕೋರಿದರು.

ಕ್ಯಾಲಿಗ್ರಫಿ, ಭಾಷಣ, ಹಾಡು, ಕ್ವಿಜ್ ಸ್ಪರ್ಧೆಯನ್ನು ನಡೆಸಲಾಯಿತು. ಕೊರೋನ ಹಾವಳಿಯ ಮುಕ್ತಿಗಾಗಿ ಸದಸ್ಯರು ಖತಮುಲ ಕುರ್ ಆನ್ ಪಾರಾಯಣ ನಡೆಸಿದರು.

ಸಮಾರೋಪ ಸಮಾರಂಭದಲ್ಲಿ ಸಯ್ಯದ್ ಸಿರಾಜುದ್ದೀನ್ ಬಾಅಲವಿ ತಂಙಳ್, ಸಯ್ಯಿದ್ ಜಲಾಲುದ್ದೀನ ಅಹ್ಮನಿ ತಂಙಳ್ ಭಾಗವಹಿಸಿ ದುವಾ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಅಕ್ರಂ ಕೆ. ಗುಡ್‌ವಿಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಜಬ್ ಸ್ವಾಗತಿಸಿದರು. ಬಶೀರ ಜನಪ್ರಿಯ ವಂದಿಸಿದರು. ಬಾಸಿತ್ ಕಾರ್ಯಕ್ರಮ ನಿರೂಪಿಸಿದರು. ಶಾಹಿದ್, ಫಾರೂಕ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News