×
Ad

ಅಮೆರಿಕದಲ್ಲಿ ವೈದ್ಯವೃತ್ತಿಯಲ್ಲಿರುವ ಭಾರತ ಮೂಲದ ತಂದೆ-ಮಗಳು ಕೋವಿಡ್-19ಗೆ ಬಲಿ

Update: 2020-05-08 15:15 IST

ನ್ಯೂಯಾರ್ಕ್,ಮೇ 8: ನ್ಯೂಜೆರ್ಸಿಯಲ್ಲಿ ವೈದ್ಯ ವೃತ್ತಿಯಲ್ಲಿರುವ ಭಾರತ ಮೂಲದ ತಂದೆ ಹಾಗೂ ಮಗಳು ಕೋವಿಡ್-19ಗೆ ಬಲಿಯಾಗಿದ್ದಾರೆ ಎಂದು ಗವರ್ನರ್ ಫಿಲ್ ಮರ್ಫಿ ತಿಳಿಸಿದ್ದಾರೆ. ಇತರರಿಗೆ ಜೀವವನ್ನು ಸಮರ್ಪಿಸಿರುವ ತಂದೆ-ಮಗಳನ್ನು  ಮರ್ಫಿ ಶ್ಲಾಘಿಸಿದರು.

 78 ವಯಸ್ಸಿನ ಸತ್ಯೇಂದರ್ ದೇವ್ ಖನ್ನಾ ಸರ್ಜನ್ ಆಗಿದ್ದು,ದಶಕಗಳ ಕಾಲ ನ್ಯೂಜೆರ್ಸಿಯ ವಿವಿಧ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸಾ ವಿಭಾಗಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. 43ರ ವಯಸ್ಸಿನ ಪ್ರಿಯಾ ಖನ್ನಾ ಇಂಟರ್‌ನಲ್ ಮೆಡಿಶನ್ ಹಾಗೂ ನೆಫ್ರಾಲಾಜಿಯಲ್ಲಿ ಪ್ರಮಾಣೀಕರಿಸಿದ ಡಬಲ್ ಬೋರ್ಡ್ ಪಡೆದಿದ್ದಾರೆ. ಪ್ರಿಯಾ ಪ್ರಸ್ತುತ ಯೂನಿಯನ್ ಆಸ್ಪತ್ರೆಯಲ್ಲಿ ಮುಖ್ಯಸ್ಥರಾಗಿದ್ದರು.

ಡಾ.ಸತ್ಯೇಂದರ್ ಖನ್ನಾ ಹಾಗೂ ಪ್ರಿಯಾ ಖನ್ನಾ ಅವರು ತಂದೆ ಹಾಗೂ ಮಗಳು. ಇಬ್ಬರು ತಮ್ಮ ಜೀವವನ್ನು ಇತರರಿಗೆ ಸಹಾಯ ಮಾಡಲು ಅರ್ಪಿಸಿದರು.ಇದು ಆರೋಗ್ಯ ಹಾಗೂ ಔಷಧಗಳಿಗೆ ಮೀಸಲಾಗಿರುವ ಕುಟುಂಬ. ನಮ್ಮ ಮಾತುಗಳು ನಮ್ಮ ಸಂತಾಪವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ನ್ಯೂಜೆರ್ಸಿಯ ಗವರ್ನರ್ ಮರ್ಫಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News