×
Ad

ಕೊರೋನಗೆ ತಾನೇ ತಯಾರಿಸಿದ ಔಷಧಿ ಸೇವಿಸಿ ಪ್ರಾಣ ಕಳೆದುಕೊಂಡ ಚೆನ್ನೈಯ ಫಾರ್ಮಸಿಸ್ಟ್

Update: 2020-05-09 18:40 IST

ಚೆನ್ನೈ: ಚೆನ್ನೈನ ಹರ್ಬಲ್ ಉತ್ಪನ್ನಗಳ ತಯಾರಿಕಾ ಸಂಸ್ಥೆಯೊಂದರ ಫಾರ್ಮಸಿಸ್ಟ್ ಹಾಗೂ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ವ್ಯಕ್ತಿಯೊಬ್ಬರು ತಾವು ಹಾಗೂ ತಮ್ಮ ಮಾಲಕ ಜತೆಯಾಗಿ ‘ಕೊರೋನವೈರಸ್ ಸೋಂಕಿಗೆ ತಯಾರಿಸಿದ್ದ’  ಔಷಧಿಯನ್ನು ಸೇವಿಸಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಮೃತ ಪಾರ್ಮಸಿಸ್ಟ್ ಅನ್ನು ಕೆ ಶಿವನೇಶನ್ ಎಂದು ಗುರುತಿಸಲಾಗಿದೆ. ಆತ ಹಾಗೂ ರಾಜಕುಮಾರ್ (67) ಎಂಬವರು ಈ ಔಷಧಿಯನ್ನು ಪರೀಕ್ಷಿಸಲು ಸೇವಿಸಿದ್ದರು. ಇಬ್ಬರೂ ತಕ್ಷಣ ಪ್ರಜ್ಞೆ ತಪ್ಪಿ ಬಿದ್ದಾಗ ಆವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶಿವನೇಶನ್ ನಗರದ ಪೆರುಂಗುಡಿ ಪ್ರದೇಶದ ನಿವಾಸಿಯಾಗಿದ್ದು ಹೊಸ ಔಷಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ್ದರಿಂದ ಪ್ರಾಣವನ್ನೇ ಕಳೆದುಕೊಳ್ಳುವಂತಾಯಿತು. ಆದರೆ ರಾಜಕುಮಾರ್ ಕೆಲವೇ ಕೆಲವು ಹನಿ ಔಷಧಿ ಸೇವಿಸಿದ್ದರಿಂದ ಬಚಾವಾಗಿದ್ದು ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ಮುಂದುವರಿದಿದೆ.

ಘಟನೆ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News